ನವದೆಹಲಿ, ಆ. 31 (DaijiworldNews/MB) : ದೇಶದ ಮೊದಲ ಹೃದಯ ಆರೈಕೆ ಘಟಕವನ್ನು ಪ್ರಾರಂಭ ಮಾಡಿದ, ದೇಶದ ಮೊದಲ ಮಹಿಳಾ ಹೃದ್ರೋಗ ತಜ್ಞೆ ಶಿವರಾಮಕೃಷ್ಣ ಅಯ್ಯರ್ ಪದ್ಮಾವತಿ (103) ಅವರು ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.
ಪದ್ಮಾವತಿಯವರು ಮ್ಯಾನ್ಮಾರ್ನಲ್ಲಿ ಜನಿಸಿದ್ದು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ದಾಳಿ ನಡೆಸಿದಾಗ ಭಾರತಕ್ಕೆ ಆಗಮಿಸಿದ್ದರು. 1981ರಲ್ಲಿ ದೆಹಲಿಯ ಗೋವಿಂದ್ ವಲ್ಲಭ್ ಪಂತ್ ಆಸ್ಪತ್ರೆಯಲ್ಲಿ ದೇಶದ ಮೊದಲ ಹೃದಯ ಆರೈಕೆ ಘಟಕವನ್ನು ಆರಂಭಿಸಿದರು.
ಹನ್ನೊಂದು ದಿನಗಳ ಹಿಂದೆ ಇವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದು ಭಾನುವಾರ ಮೃತಪಟ್ಟಿದ್ದಾರೆ.