ಭುವನೇಶ್ವರ್, ಆ 31(DaijiworldNews/HR): ಕೊರೊನಾ ವೈರಸ್ ಗೆ ಕೊವಾಕ್ಸಿನ್ ಚುಚ್ಚುಮದ್ದನ್ನು ಮಾನವರ ಮೇಲಿನ ಎರಡನೆ ಹಂತದ ಪ್ರಯೋಗಕ್ಕೆ ಭುವನೇಶ್ವರದ ಆಸ್ಪತ್ರೆಯೊಂದರಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಎರಡನೆ ಹಂತದ ಪ್ರಯೋಗ ಆರಂಭಗೊಳ್ಳಲಿದೆ.
ಈ ಹಿಂದೆ ನಡೆಸಿದ ಮೊದಲನೆ ಹಂತದ ಪ್ರಯೋಗ ಯಶಸ್ವಿಯಾಗಿ ನಡೆಯುತ್ತಿದ್ದು, ಎರಡನೆ ಹಂತದ ಪ್ರಯೋಗಕ್ಕೆ ಸಿದ್ಧತೆ ನಡೆಯುತ್ತಿದೆ. ಮೊದಲನೆ ಹಂತದಲ್ಲಿ ಕೊವಾಕ್ಸಿನ್ ಚುಚ್ಚುಮದ್ದು ಹಾಕಿಸಿಕೊಂಡಿದ್ದ ಕೆಲವು ಸ್ವಯಂ ಸೇವಕರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ ಇದರಿಂದ ಅವರಿಗೆ ಯಾವುದೇ ಸೈಡ್ ಎಫೆಕ್ಟ್ ಆಗಿಲ್ಲ. ಹೀಗಾಗಿ ಎರಡನೆ ಹಂತದ ತಯಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಎಸ್ಯುಎಂ ಆಸ್ಪತ್ರೆಯ ಮುಖ್ಯಸ್ಥ ಡಾ.ಇ.ವೆಂಕಟರಾವ್ ತಿಳಿಸಿದ್ದಾರೆ.
ಭಾರತದ 12 ಮೆಡಿಕಲ್ ಕೇಂದ್ರಗಳಲ್ಲಿ ಕೊರೊನಾ ವಿರುದ್ಧದ ಔಷಧಿ ಕಂಡು ಹಿಡಿಯುವ ಕೇಂದ್ರಗಳಾಗಿ ಐಸಿಎಂಆರ್ ಗುರುತಿಸಿದ್ದು ಈ ಕೇಂದ್ರಗಳಲ್ಲಿ ಎಸ್ಯುಎಂ ಆಸ್ಪತ್ರೆಯು ಒಂದಾಗಿದ್ದು, ಇದೀಗ ಆಸ್ಪತ್ರೆಯಲ್ಲಿ ಎರಡನೆ ಹಂತದ ಪರೀಕ್ಷಾ ಸಿದ್ಧತೆ ಆರಂಭಗೊಂಡಿದ್ದು, ಶೀಘ್ರದಲ್ಲೇ ಕೊರೊನಾ ವೈರಸ್ ಗೆ ರಾಮಬಾಣವಾಗಲಿರುವ ಕೊವಾಕ್ಸಿನ್ ಚುಚ್ಚುಮದ್ದು ಯಶಸ್ವಿಯಾಗಲಿದೆ ಎಂದು ಡಾ.ಇ.ವೆಂಕಟರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.