ಪ್ರಧಾನಿ ಮೋದಿ ಮನ್ ಕಿ ಬಾತ್ಗೆ ಲೈಕ್ಸ್ಗಿಂತಲೂ ಅಧಿಕ ಡಿಸ್ಲೈಕ್ಸ್..!
Mon, Aug 31 2020 02:16:57 PM
ನವದೆಹಲಿ, ಆ. 31 (DaijiworldNews/MB) : ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಸುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈ ವಿಡಿಯೋಗೆ ಪ್ರತಿ ಬಾರಿಯೂ ಅಧಿಕ ಲೈಕ್ಸ್ ಬರುತ್ತಿತ್ತು. ಆದರೆ ಈ ತಿಂಗಳ ಮನ್ ಕಿ ಬಾತ್ ಗೆ ಲೈಕ್ಸ್ಗಿಂಲೂ ಅಧಿಕವಾಗಿ ಡಿಸ್ಲೈಕ್ಗಳೇ ಬಂದಿದೆ.
ಹೌದು ಭಾರತೀಯ ಜನತಾ ಪಾರ್ಟಿಯ ಯ್ಯೂಟ್ಯೂಬ್ ಚಾನಲ್ನಲ್ಲಿ ಪ್ರಸಾರವಾಗಿರುವ ಪ್ರಧಾನಿ ನರೇಂದ್ರ ಮೋದಿಯವರ 68 ನೇ ಮನ್ ಕಿ ಬಾತ್ಗೆ 67 ಸಾವಿರ ಲೈಕ್ ಬಂದಿದ್ದರೆ, 4 ಲಕ್ಷದ 75 ಸಾವಿರಕ್ಕೂ ಅಧಿಕ ಡಿಸ್ಲೈಕ್ಗಳು ಬಂದಿದೆ.
ಅಷ್ಟೇ ಅಲ್ಲದೆ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಿರುವ ಪಿಎಂಓ ಇಂಡಿಯಾ, ನರೇಂದ್ರ ಮೋದಿ, ಬಿಜೆಪಿ ಮತ್ತು ಡಿಡಿ ವಾಹಿನಿ ಯೂಟ್ಯೂಬ್ ಚಾನೆಲ್ನಲ್ಲಿಯೂ ಕೂಡಾ ಲೈಕ್ಸ್ಗಿಂತ ಅಧಿಕವಾಗಿ ಡಿಸ್ಲೈಕ್ ಬಂದಿದೆ.
ಭಾನುವಾರ ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿಯವರು, ಕೊರೊನಾ, ಓಣಂ ಆಚರಣೆ, ಆಟಿಕೆ ಉದ್ಯಮ ಮೊದಲಾದ ಬಗ್ಗೆ ಮಾತನಾಡಿದ್ದಾರೆ. ಆದರೆ ಜೆಇಇ ಮತ್ತು ನೀಟ್ ಪರೀಕ್ಷೆಗಳ ರದ್ದತಿ ಕುರಿತು ಮೋದಿ ಮಾತನಾಡಿರಲಿಲ್ಲ ಎಂಬುದು ಈ ಆಕ್ರೋಶಕ್ಕೆ ಕಾರಣ ಎಂದು ಹೇಳಲಾಗಿದೆ.ಈ ಡಿಸ್ಲೈಕ್ಗಳನ್ನು ಅಧಿಕವಾಗಿ ಯುವ ಜನರು ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಡಿಸ್ಲೈಕ್ಗಳೇ ಅಧಿಕವಾಗಿರು ಬಗ್ಗೆ ಜನರು ಯೂಟ್ಯೂಬ್ ಚಾನೆಲ್ ಕಾಮೆಂಟ್ನಲ್ಲಿಯೇ ಚರ್ಚೆಗೆ ಇಳಿದಿದ್ದಾರೆ. ಅತೀ ಹೆಚ್ಚು ಡಿಸ್ಲೈಕ್ಸ್ ಪಡೆದ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಎನ್ನುವ ಕಾಮೆಂಟ್ಗಳನ್ನು ಕೂಡಾ ಮಾಡುತ್ತಿದ್ದಾರೆ.