ನವದೆಹಲಿ, ಸ.1(DaijiworldNews/HR): ಕೊರೊನಾ ಭೀತಿಯ ನಡುವೆಯು ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ದಿನ ನಿಗದಿಯಾಗಿದ್ದು, ಸೆಪ್ಟೆಂಬರ್ 14 ರಿಂದ ಸತತ 18 ದಿನ ನಡೆಯಲಿದೆ.
ಇನ್ನು ಕಡ್ದಾಯವಾಗಿ ಅಧಿವೇಶವ ಪ್ರಾರಂಭದ 72 ತಾಸಿಗೆ ಮೊದಲು ಸಂಸದರ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ.
ಸೆಪ್ಟಂಬರ್ 14 ರಂದು ಬೆಳಗ್ಗೆ 9ರಿಂದ ಅಧಿವೇಶನ ಕಲಾಪ ನಡೆಸಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಸೂಚಿಸಿದ್ದಾರೆ. ಬೆಳಿಗ್ಗೆ ಲೋಕಸಭೆ ಮತ್ತು ಸಂಜೆ ರಾಜ್ಯಸಭೆ ಅಧಿವೇಶನ ಕಲಾಪ ತಲಾ ನಾಲ್ಕು ತಾಸು ನಡೆಸಲು ಉದ್ದೇಶಿಸಲಾಗಿದೆ.
ಪ್ರಧಾನಿ, ಸದನದ ನಾಯಕರು, ವಿರೋಧ ಪಕ್ಷದ ನಾಯಕರು, ಸಚಿವರು ತಮ್ಮ ಛೇಂಬರ್ನಲ್ಲಿಯೇ ಕುಳಿತು ಕಲಾಪದಲ್ಲಿ ಪಾಲ್ಗೊಳ್ಳಲಿದ್ದಾರೆ. ಮತ್ತು ಕಲಾಪ ನೋಡಲು ಸಾಧ್ಯವಾಗುವಂತೆ ದೊಡ್ಡ ಎಲ್ಇಡಿ ಪರದೆಗಳ ವ್ಯವಸ್ಥೆ ಮಾಡಲಾಗುತ್ತಿದೆ.