ಬೆಂಗಳೂರು, ಸೆ.1(DaijiworldNews/HR): ತುರ್ತು ಪರಿಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರು ಇನ್ನು ಮುಂದೆ ಹೆಚ್ಚು ಹೊತ್ತು ಕಾಯಬೇಕಿಲ್ಲ, ರಸ್ತೆ ಪ್ರಯಾಣದ ಬದಲು ಕೊರೊನಾ ರೋಗಿಗಳಿಗೆ ಏರ್ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗುತ್ತಿದೆ.
ಸಾಂಧರ್ಭಿಕ ಚಿತ್ರ
ಈ ಸೇವೆಯನ್ನು ಬೆಂಗಳೂರಿನಿಂದ ಆರಂಭಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅನುಮತಿ ನೀಡಿದ್ದಾರೆ ಎಂದು ಐಕಾತ್ ಮಾರ್ಕೆಟಿಂಗ್ ಮುಖ್ಯಸ್ಥ ಫಾಹಿಮ್ ಹುಸೇನ್ ತಿಳಿಸಿದ್ದಾರೆ.
ಮುಂಬೈ, ದೆಹಲಿ ಮುಂತಾದ ನಗರಗಳಲ್ಲಿ ಈ ಮೊದಲು ಮಾಡುತ್ತಿದ್ದೆವು. ಈಗ ಬೆಂಗಳೂರಿನಲ್ಲಿ ಆರಂಭಿಸಿದ್ದೇವೆ. ಇದರಿಂದ ಎಮರ್ಜೆನ್ಸಿ ಇರುವ ರೋಗಿಗಳಿಗೆ ಶೀಘ್ರವಾಗಿ ಚಿಕಿತ್ಸೆ ಲಭ್ಯವಾಗಲಿದ್ದು, ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಜಕ್ಕೂರು ಏರ್ ಡ್ರಮ್ಸ್ ನಿಂದ ಏರ್ ಆಂಬ್ಯುಲೆನ್ಸ್ ಸೇವೆ ಅಸ್ಥಿತ್ವಕ್ಕೆ ಬರಲಿದೆ. ಇದು ಸೆಪ್ಟೆಂಬರ್ ತಿಂಗಳಿನಿಂದ ಹಾರಾಟ ನಡೆಸಲಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯದ ಡಿಜಿ ಅವರಿಂದ ಅನುಮೋದನೆ ಪಡೆದಿರುವುದಾಗಿ ತಿಳಿಸಿದ್ದಾರೆ.
ಇನ್ನು ತುಂಬಾ ಹಳ್ಳಿ ಪ್ರದೇಶದಲ್ಲಿರುವ ರೋಗಿಗಳನ್ನು ತುರ್ತಾಗಿ ಕರೆ ತರಲು ಏರ್ ಆಂಬ್ಯುಲೆನ್ಸ್ ಸಹಾಯ ಮಾಡಲಿದೆ ಎಂದು ತಿಳಿಸಿದರು.