ನವದೆಹಲಿ, ಸೆ. 01 (DaijiworldNews/MB) : ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಆರ್ಎಸ್ಎಸ್ನ ಮಾಜಿ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಪ್ರಣಬ್ ಮುಖರ್ಜಿಯವರು ಆರ್ಎಸ್ಎಸ್ಗೆ ಮಾರ್ಗದರ್ಶಿಯಾಗಿದ್ದರು ಎಂದು ಹೇಳಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 84 ವರ್ಷ ಪ್ರಾಯದ ಪ್ರಣಬ್ ಮುಖರ್ಜಿ ಅವರು ಮೆದುಳು ಚಿಕಿತ್ಸೆಯ ಬಳಿಕ ಕೋಮಾಕ್ಕೆ ಜಾರಿದ್ದು ಸೋಮವಾರ ಕೊನೆಯುಸಿರೆಳೆದಿದ್ದಾರೆ. ಚಿಕಿತ್ಸೆಗೂ ಮುನ್ನ ಕೊರೊನಾ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿತ್ತು.
ಮಾಜಿ ರಾಷ್ಟ್ರಪತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಮೋಹನ್ ಭಾಗವತ್ ಅವರು, ಪ್ರಣಬ್ ಮುಖರ್ಜಿಯವರು ಆರ್ಎಸ್ಎಸ್ಗೆ ಮಾರ್ಗದರ್ಶಿಯಾಗಿದ್ದರು. ಅವರು ಯಾವುದೇ ರಾಜಕೀಯ ಅಸ್ಪೃಶ್ಯತೆಯನ್ನು ನಂಬುತ್ತಿರಲಿಲ್ಲ. ಅವರು ಎಲ್ಲಾ ಪಕ್ಷಗಳಿಂದ ಗೌರವಿಸಲ್ಪಟ್ಟರು ಎಂದು ಹೇಳಿದ್ದಾರೆ.
ಭಾಗವತ್ ಅವರು ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಷಿ ಅವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಪ್ರಣಬ್ ಮುಖರ್ಜಿ ಅವರು ರಾಷ್ಟ್ರೀಯ ಹಿತಾಸಕ್ತಿಯನ್ನು ಉಳಿಸಿಕೊಂಡಿರುವ ಸಮರ್ಥ ಆಡಳಿತಗಾರರಾಗಿದ್ದರು ಎಂದಿದ್ದಾರೆ.
"ಅವರು ಸಂಘಕ್ಕೆ ಮಾರ್ಗದರ್ಶಕರಾಗಿದ್ದರು ಮತ್ತು ಸಂಘಟನೆಯ ಬಗ್ಗೆ ಪ್ರೀತಿಯಿಂದಿದ್ದರು. ಈಗ ಅವರ ಅಗಲುವಿಕೆಯಿಂದಾಗಿ ಆರ್ಎಸ್ಎಸ್ಗೆ ತುಂಬಲಾಗದ ನಷ್ಟವಾಗಿದೆ" ಎಂದು ತಿಳಿಸಿದ್ದಾರೆ.
ಪ್ರಣಬ್ ಮುಖರ್ಜಿ ಅವರು ಜೂನ್, 2018 ರಲ್ಲಿ ಆರ್ಎಸ್ಎಸ್ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವು ಟೀಕಿಸಿತ್ತು, ಬಳಿಕ ಭಾರತದ ಆತ್ಮವಾದ ಬಹುತ್ವ, ಸಹಿಷ್ಣುತೆಯನ್ನು ಎತ್ತಿ ಹಿಡಿದ ಅವರ ಬಗ್ಗೆ ಕಾಂಗ್ರೆಸ್ ಮೆಚ್ಚುಗೆ ವ್ಯಕ್ತಪಡಿಸಿತ್ತು.
"ಧರ್ಮ, ದ್ವೇಷ, ಸಿದ್ಧಾಂತಗಳು ಮತ್ತು ಅಸಹಿಷ್ಣುತೆ" ಮೂಲಕ ಭಾರತವನ್ನು ವ್ಯಾಖ್ಯಾನಿಸುವ ಯಾವುದೇ ಪ್ರಯತ್ನವು ನಮ್ಮ ಅಸ್ತಿತ್ವವನ್ನು ದುರ್ಬಲಗೊಳಿಸುತ್ತದೆ ಆರ್ಎಸ್ಎಸ್ನ ಕಾರ್ಯಕ್ರಮದಲ್ಲಿ ಎಚ್ಚರಿಕೆ ನೀಡಿದ್ದ ಮುರ್ಖಜಿಯವರು, ಎಲ್ಲಾ ರೀತಿಯ ಹಿಂಸಾಚಾರವನ್ನು ಮುಕ್ತಗೊಳಿಸಬೇಕು ಎಂದು ಹೇಳಿದ್ದರು.
ನೂರಾರು ಕಾರ್ಮಿಕರಿಗೆ ಮತ್ತು ಆರ್ಎಸ್ಎಸ್ನ ಉನ್ನತ ಅಧಿಕಾರಿಗಳಿಗೆ ಪ್ರಣಬ್ ಮುಖರ್ಜಿ ನೀಡಿದ ಸಂದೇಶವನ್ನು ಕಾಂಗ್ರೆಸ್ "ಆರ್ಎಸ್ಎಸ್ಗೆ ಸತ್ಯದ ಕನ್ನಡಿ" ಎಂದು ಬಣ್ಣಿಸಿತ್ತು.