ಬೆಂಗಳೂರು, ಸೆ. 01 (DaijiworldNews/MB) : ಡ್ರಗ್ಸ್ ಮಾಫಿಯಾದಿಂದ ವಸೂಲಿ ಮಾಡಿದ ಹಣದಿಂದಲೇ ನನ್ನ ನೇತೃತ್ವದ ಸರ್ಕಾರವನ್ನು ಬುಡಮೇಲು ಮಾಡಲಾಗಿದೆ ಎಂದು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ''ಮತ್ತಿನಲ್ಲಿ ಹೇಳಿಕೆ ನೀಡಿದ್ದಾರಾ?'' ಎಂದು ಸಚಿವ ಸಿ.ಟಿ ರವಿ ಅವರು ಟಾಂಗ್ ನೀಡಿದ್ದಾರೆ.
''ಹೆಚ್ಡಿಕೆ ಅವರು ಈ ರೀತಿ ಅಸಂಬದ್ದ ಹೇಳಿಕೆ ನೀಡುವುದು ನೋಡಿದರೆ ಅವರನ್ನು ಮೊದಲು ಪರೀಕ್ಷೆ ನಡೆಸಬೇಕು. ಅವರು ಸಹಜವಾಗಿರುವಾಗ ಈ ಹೇಳಿಕೆ ನೀಡಿದ್ದಾರಾ ಅಥವಾ ಮತ್ತಿನಲ್ಲಿ ಇರುವಾಗ ಈ ಹೇಳಿಕೆ ನೀಡಿದ್ದಾರಾ' ಎಂದು ಪರೀಕ್ಷೆ ನಡೆಸಬೇಕು'' ಎಂದು ಲೇವಡಿ ಮಾಡಿದ್ದಾರೆ.
''ಡ್ರಗ್ಸ್ ಹಣದಿಂದ ಮೈತ್ರಿ ಸರ್ಕಾರ ಪತನವಾಗಿದೆ ಎಂದು ಹೇಳುವ ಅವರು, ಸ್ವತಃ ಅವರೇ ಮುಖ್ಯಮಂತ್ರಿ ಆಗಿದ್ದಾಗ ಇದರ ಬಗ್ಗೆ ಸುಮ್ಮನೆ ಇದ್ದದ್ದು ಯಾಕೆ'' ಎಂದು ಪ್ರಶ್ನಿಸಿದರು.