ಶ್ರೀನಗರ, ಸೆ. 01 (DaijiworldNews/MB) : ಇತಿಹಾಸದಲ್ಲೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಉಗ್ರರ ದಾಳಿ ಪೀಡಿತ ಪ್ರದೇಶದಲ್ಲಿ ಒಂದಾದ ಶ್ರೀನಗರದ ಕೇಂದ್ರ ರಿಸರ್ವ್ ಪೊಲೀಸ್ ಪಡೆ ಶ್ರೀನಗರ ವಲಯದ ಇನ್ಸ್ಪೆಕ್ಟರ್ ಜನರಲ್ ಆಗಿ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ನೇಮಕಗೊಂಡಿದ್ದಾರೆ.
ಐಪಿಎಸ್ ಅಧಿಕಾರಿ ಚಾರು ಸಿನ್ಹಾ ಅವರು 1996 ರ ಬ್ಯಾಚ್ ತೆಲಂಗಾಣ ಕೇಡರ್ ಆಗಿದ್ದು ಸಿಆರ್ಪಿಎಫ್ನಲ್ಲಿ ಬಿಹಾರ ವಲಯದ ಐಜಿಯಾಗಿದ್ದರು. ಅವರ ನಾಯಕತ್ವದಲ್ಲಿ ನಕ್ಸಲರ ವಿರುದ್ದ ಹಲವು ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು.
ಬಳಿಕ ಜಮ್ಮುವಿಗೆ ಸಿಆರ್ಪಿಎಫ್ನ ಐಜಿಯಾಗಿ ವರ್ಗಾವಣೆಗೊಂಡ ಅವರು ಅಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದು ಸೋಮವಾರ ಶ್ರೀನಗರ ವಲಯದ ಐಜಿಯಾಗಿ ವರ್ಗಾವಣೆಗೊಂಡಿದ್ದಾರೆ.
ಇನ್ನು ಈ ವಲಯವು 2005 ರಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದ್ದು ಈವರೆಗೆ ಯಾವುದೇ ಮಹಿಳಾ ಅಧಿಕಾರಿಗಳು ಇಲ್ಲಿ ಕಾರ್ಯ ನಿರ್ವಹಿಸಿಲ್ಲ.