ಚೆನ್ನೈ, ಸೆ.1(DaijiworldNews/HR): ಬಿಜೆಪಿ ಸೇರಲು ಸಿದ್ಧನಾಗಿದ್ದ ಕುಖ್ಯಾತ ಗ್ಯಾಂಗ್ ಸ್ಟಾರ್ ರೆಡ್ ಹಿಲ್ಸ್ ಸೂರ್ಯ ಪೊಲೀಸರನ್ನು ನೋಡಿದ ತಕ್ಷಣ ಸ್ಥಳದಿಂದ ಪರಾರಿಯಾದ ಕುತೂಹಲಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಸಮ್ಮುಖದಲ್ಲಿ ಸೂರ್ಯ ಪಕ್ಷ ಸೇರಲಿದ್ದ ಸೂರ್ಯನ ವಿರುದ್ಧ ಕೊಲೆ ಪ್ರಕರಣಗಳ ಸಹಿತ 50ಕ್ಕೂ ಅಧಿಕ ಕೇಸ್ ಗಳಿವೆ. ವಂಡಲೂರ್ ಸಮೀಪ ಆತನ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎಂದು ಪೊಲೀಸರಿಗೆ ಮಾಹಿತಿ ದೊರೆತು ಅವರು ಅಲ್ಲಿಗೆ ಧಾವಿಸಿದ್ದರು.
ಪೊಲೀಸರು ಸ್ಥಳಕ್ಕೆ ಧಾವಿಸಿದನ್ನು ಕಂಡ ಸೂರ್ಯ ತನ್ನ ಕಾರಿನಲ್ಲಿ ಪರಾರಿಯಾಗಿದ್ದಾನೆ. ಆದರೆ ಆ ಕಾರ್ಯಕ್ರಮದಲ್ಲಿ ಹಾಜರಿದ್ದ ಸೂರ್ಯನ ನಾಲ್ಕು ಮಂದಿ ಸಹಚರರನ್ನು ಪೊಲೀಸರು ಬಂಧಿಸಿ ಅವರ ವಾಹನದಲ್ಲಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದಾರೆ.
ಬಂಧಿತರ ವಿರುದ್ಧ ಸೆಕ್ಷನ್ 144 ಅನ್ವಯ ಕೇಸು ದಾಖಲಿಸಿದ ಪೊಲೀಸರು ನಾಲ್ವರಿಗೆ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದಾರೆ.