ನವದೆಹಲಿ, ಸೆ. 02 (DaijiworldNews/MB) : ಮೋದಿ ನಿರ್ಮಿಸಿದ ವಿಪತ್ತುಗಳ ಅಡಿಯಲ್ಲಿ ಭಾರತ ತತ್ತರಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಆರು ವಿಚಾರಗಳನ್ನು ತಿಳಿಸಿದ್ದಾರೆ. ''ಭಾರತದಲ್ಲಿ ಐತಿಹಾಸಿಕ ಜಿಡಿಪಿ ಕುಸಿತಗೊಂಡು 23.9% ಕ್ಕೆ ಕುಸಿದಿದೆ. ಕಳೆದ 45 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ಮೋದಿ ಆಡಳಿತದಲ್ಲಿ ಸೃಷ್ಟಿಯಾಗಿದೆ. ಸುಮಾರು 12 ಕೋಟಿ ಉದ್ಯೋಗ ನಷ್ಟವಾಗಿದೆ. ರಾಜ್ಯಗಳಿಗೆ ಸಲ್ಲಬೇಕಾದ ಜಿಎಸ್ಟಿ ಬಾಕಿಯನ್ನು ಕೂಡಾ ಕೇಂದ್ರ ಪಾವತಿಸುವುತ್ತಿಲ್ಲ. ಜಾಗತಿಕವಾಗಿ ಅತಿ ಹೆಚ್ಚು ಕೊರೊನಾ ದೈನಂದಿನ ಪ್ರಕರಣಗಳು ಹಾಗೂ ಸಾವುಗಳು ಸಂಭವಿಸುತ್ತಿದೆ. ಬೇರೆ ದೇಶದವರು ನಮ್ಮ ಗಡಿಯನ್ನು ಆಕ್ರಮಣ ಮಾಡಿದ್ದಾರೆ'' ಎಂದು ಒಟ್ಟು ಆರು ಅಂಶಗಳನ್ನು ರಾಹುಲ್ ಉಲ್ಲೇಖಿಸಿದ್ದಾರೆ.
ಇನ್ನು ಕೇಂದ್ರ ರಾಜ್ಯಗಳಿಗೆ ಜಿಎಸ್ಟಿ ಬಾಕಿ ಮೊತ್ತವನ್ನು ನೀಡದಿರುವುದು ದೇಶದಾದ್ಯಂತ ರಾಜ್ಯ ಸರ್ಕಾರಗಳ ಆಕ್ರೋಶಕ್ಕೆ ಕಾರಣವಾಗಿದೆ.