ಶ್ರೀನಗರ, ಸೆ 02 (DaijiworldNews/PY): ಭಾರತೀಯ ಸೇನಾಪಡೆ ಹಾಗೂ ಬುದ್ಲಾಮ್ ಪೊಲೀಸರು ಜಮ್ಮು-ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಿದ್ದು, ನಾಲ್ವರು ಲಷ್ಕರ್-ಇ-ತೊಯ್ಬಾ ಉಗ್ರರ ಸಹಚರರನ್ನು ಬಂಧಿಸಿದೆ.
ಭಾರತೀಯ ಸೇನಾಪಡೆ ಹಾಗೂ ಬುದ್ಲಾಂ ಪೊಲೀಸರಿಗೆ, ಬುದ್ಗಾಂನ ಬೀರ್ವಾಹ್ ಹಾಗೂ ಪತ್ಕೂಟ್ ಪ್ರದೇಶದಲ್ಲಿ ಸಂಶಯಾಸ್ಪದ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸೂಕ್ತ ಮಾಹಿತಿ ತಿಳಿದುಬಂದ ತಕ್ಷಣವೇ ಕಾರ್ಯಾಚರಣೆ ಆರಂಭಿಸಿದ್ದು, ಈ ಸಂದರ್ಭ ನಾಲ್ವರು ಲಷ್ಕರ್-ಇ-ತೊಯ್ಬಾ ಉಗ್ರರ ಸಹಚರರನ್ನು ಬಂಧಿಸಿದೆ.
ಭಾರತೀಯ ಸೇನಾಪಡೆಯು ಶಂಕಿತ ಉಗ್ರರಿಂದ 4 ಎಕೆ-47, 5 ಸ್ಫೋಟಕ ವಸ್ತುಗಳು ಸೇರಿದಂತೆ ಇತರೆ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.