ಶಿಮ್ಲಾ, ಸೆ 02 (DaijiworldNews/PY): ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ)ಯ ಪರ್ವತಾರೋಹಿಗಳು ಹಿಮಾಚಲ ಪ್ರದೇಶದಲ್ಲಿರುವ ಸುಮಾರು 22,222 ಅಡಿ ಎತ್ತರದಲ್ಲಿರುವ ಲಿಯೋ ಪಾರ್ಗಿಲ್ ಪರ್ವತವನ್ನು ಯಶಸ್ವಿಯಾಗಿ ಏರಿದ್ದು, ಭಾರತದ ಬಾವುಟ ಹಾರಿಸುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
16 ಸದಸ್ಯರ ತಂಡದಲ್ಲಿ ಒಟ್ಟು 12 ಸದಸ್ಯರು ಪರ್ವತ ಏರಿದ್ದಾರೆ. ಉಪ ಕಮಾಂಡರ್ ಕುಲ್ದೀಪ್ ಸಿಂಗ್ ಹಾಗೂ ಡೆಪ್ಯುಟಿ ಕಮಾಂಡೆಂಟ್ ಧಮೇಂದ್ರ ಅವರು ತಂಡದ ನಾಯಕತ್ವನ್ನು ವಹಿಸಿದ್ದರು. ಇವರೊಂದಿಗೆ ಹೆಡ್ ಕಾನ್ಸ್ಟೇಬಲ್ ಪ್ರದೀಪ್ ನೇಗಿ ಅವರು ಎರಡನೇ ಬಾರಿಗೆ ಶಿಖರವನ್ನೇರಿದ್ದಾರೆ. ಪ್ರದೀಪ್ ಅವರು ಈ ಹಿಂದೆ ಕೂಡಾ ವಿಶ್ವದ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಅನ್ನು ಎರಡು ಬಾರಿ ಏರಿದ್ದರು ಎಂದು ಐಟಿಬಿಪಿ ಹೇಳಿದೆ.
ಈ ತಂಡದ ಎಲ್ಲಾ ಸದಸ್ಯರು ತರಬೇತಿಗಳನ್ನು ಪಡೆದುಕೊಂಡಿದ್ದು ಅಲ್ಲದೇ, ಕೊರೊನಾ ನಡುವೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರ್ವತ ಏರಿದ್ದಾರೆ ಎಂದು ಐಟಿಬಿಪಿ ತಿಳಿಸಿದೆ.
ಲಿಯೋ ಪಾರ್ಗಿಲ್ ಪರ್ವತವು ಹಿಮಾಚಲ ಪ್ರದೇಶದ ಲಾಹೌಲ್ನ ಸ್ಪಿಟಿ ಜಿಲ್ಲೆಯಲ್ಲಿದೆ. ಈ ಶಿಖರವನ್ನು ಏರಲು ತುಂಬಾ ಕಠಿಣವಾಗಿದೆ. ಅಲ್ಲದೇ, ಕಡಿಮೆ ಆಮ್ಲಜನಕ, ಶೀತ ಹಾಗೂ ಹೆಚ್ಚಿನ ಸಮಸ್ಯೆಗಳನ್ನು ಹೊಂದಿದೆ.