ಡೆಹ್ರಾಡೂನ್, ಸೆ 02 (DaijiworldNews/PY): ಉತ್ತರಖಂಡದ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರ ವಿಶೇಷ ಅಧಿಕಾರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಸಿಎಂ ಅವರು ಮತ್ತೊಮ್ಮೆ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ ಎಂದು ಬುಧವಾರ ಮೂಲಗಳು ತಿಳಿಸಿವೆ.
ಈ ಪರಿಣಾಮ ಬುಧವಾರ ನಿಗದಿಯಾಗಿದ್ದ ರಾಜ್ಯ ಸಚಿವ ಸಂಪುಟದ ಸಭೆಯನ್ನು ಮುಂದೂಡಲಾಗಿದೆ ಎಂದು ಮೂಲಗಳು ಹೇಳಿವೆ.
ಕೊರೊನಾ ಪರೀಕ್ಷೆಯ ವೇಳೆ ಒಎಸ್ಡಿ ಅವರಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಸಿಎಂ ಅವರು ಮೂರು ದಿನಗಳವರೆಗೆ ಸ್ವಯಂ-ಕ್ವಾರಂಟೈನ್ಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸಲಹೆಗಾರರೊಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಕಾರಣ ರಾವತ್ ಅವರು ಮುಂಜಾಗ್ರತಾ ಕ್ರಮವಾಗಿ ಆ.26ರಂದು ಮೂರು ದಿನಗಳ ಕಾಲ ಸ್ವಯಂ-ಕ್ವಾರಂಟೈನ್ಗೆ ಒಳಗಾಗಿದ್ದರು. ಹೀಗಾಗಿ ಆ.26ರಂದು ನಡೆಯಬೇಕಿದ್ದ ರಾಜ್ಯ ಸಚಿವ ಸಂಪುಟ ಸಭೆಯನ್ನು ಮುಂದೂಡಿದ್ದರು.