ಹಾವೇರಿ, ಸೆ. 02 (DaijiworldNews/MB) : ಪೊಲೀಸರು, ರಾಜಕಾರಣಿಗಳು ಕೂಡಾ ಡ್ರಗ್ ಮಾಫಿಯಾದಲ್ಲಿ ಇದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ''ಪೊಲೀಸರು, ರಾಜಕಾರಣಿಗಳು ಇಲ್ಲದೆ ಡ್ರಗ್ ದಂಧೆ ನಡೆಯಲು ಸಾಧ್ಯವೇ ಇಲ್ಲ. ಪೊಲೀಸರಿಗೆ ಇದರ ಬಗ್ಗೆ ಎಲ್ಲಾ ಮಾಹಿತಿ ಇರುತ್ತದೆ. ಆದರೆ ಅವರು ಹಣ, ಭಷ್ಟಾಚಾರ, ರಾಜಕೀಯ ಒತ್ತಡದಿಂದ ಏನನ್ನು ಹೇಳುವುದಿಲ್ಲ ಆರೋಪಿಸಿರುವ ಅವರು ಈಗ ಅವರು ಬೇರು ಕಿತ್ತು ಮಾಡುತ್ತೇವೆ ಎಂದು ಹಾರಾಡ್ತಾರೆ. ಈ ಹಿಂದೆಯೂ ನಾವು ಡ್ರಗ್ ದಂಧೆಯ ಬಗ್ಗೆ ಹೇಳಿದ್ದೇವೆ. ಪೊಲೀಸರಿಂದ ಹುಡುಕಲು ಆಗದಿದ್ದರೆ ನಾನು ಯಾರೆಂದು ತೋರಿಸಿ ಕೊಡುತ್ತೇನೆ'' ಎಂದು ಹೇಳಿದ್ದಾರೆ.
ಇನ್ನು ಗೃಹ ಸಚಿವ ಬಸವರಾಜು ಬೊಮ್ಮಾಯಿ ಹಾಗೂ ಸಚಿವ ಸಿ. ಟಿ. ರವಿ ವಿರುದ್ದ ವಾಗ್ದಾಳಿ ನಡೆಸಿದ ಅವರು, ''ಗೃಹ ಸಚಿವರು ಮತ್ತು ಸಿಟಿ ರವಿ ನಾವು ಡ್ರಗ್ಸ್ ದಂಧೆಯನ್ನು ಸಮೇತ ಕಿತ್ತು ಹಾಕುತ್ತೇವೆ ಎನ್ನುತ್ತಾರೆ. ಈಗ ಎಲ್ಲರೂ ನಾಟಕ ಮಾಡಿ ಸ್ವಲ್ಪ ದಿನದಲ್ಲೇ ಎಲ್ಲವೂ ಮರೆಯುತ್ತಾರೆ. ಈ ಡ್ರಗ್ಸ್ ದಂಧೆಯಲ್ಲಿ ರಾಜಕಾರಣಿಗಳು ಕೂಡಾ ಇದ್ದಾರೆ'' ಎಂದು ದೂರಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ಇದೇ ಎಂದು ಆರೋಪ ಮಾಡಿರುವ ಇಂದ್ರಜೀತ್ ಲಂಕೇಶ್ ವಿರುದ್ದವೂ ಕಿಡಿಕಾರಿರುವ ಮುತಾಲಿಕ್, ''ಈಗ ಇಂದ್ರಜೀತ್ ಲಂಕೇಶ್ ದೊಡ್ಡ ಹಿರೋನಂತೆ ವರ್ತಿಸುತ್ತಾರೆ ಎಂದು ಹೇಳಿದ್ದು ನಿಮ್ಮ ಸಹೋದರಿ ಗೌರಿ ಲಂಕೇಶ್ ಡ್ರಗ್ ಅಡಿಕ್ಟ್ ಆಗಿದ್ದರು. ಆಗ ನೀವು ಎಲ್ಲಿ ಹೋಗಿದ್ರಿ'' ಎಂದು ಪ್ರಶ್ನಿಸಿದ್ದಾರೆ.