ಬೆಂಗಳೂರು, ಸೆ. 3(DaijiworldNews/HR): ಸ್ಯಾಂಡಲ್ ವುಡ್ ನ ಕೆಲವು ನಟ-ನಟಿಯರು ಡ್ರಗ್ಸ್ ಧಂದೆಯಲ್ಲಿ ಶಾಮಿಲಾಗಿದ್ದಾರೆ ಎಂಬ ಗಂಭೀರ ಆರೋಪಗಳ ಬೆನ್ನಲ್ಲೇ ಸಿಸಿಬಿ ತನಿಖೆ ಚುರುಕುಗೊಳಿಸಿದ್ದು ಇದೀಗ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿಗೆ ನೋಟಿಸ್ ನೀಡಿದ್ದಾರೆ.
ಇನ್ನು ರಾಗಿಣಿ ಅವರ ಗೆಳೆಯ ಜಯನಗರದ ಆರ್ ಟಿಒ ಅಧಿಕಾರಿ ರವಿಶಂಕರ್ ರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಬಳಿಕ ಇಂದು 10ಗಂಟೆಗೆ ರಾಗಿಣಿಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ.
2019ರಲ್ಲಿ ಖಾಸಗಿ ಹೋಟೆಲ್ ರಿಟ್ಜ್ ಕಾಲ್ರ್ ಟನ್ ನಲ್ಲಿ ಬಿಯರ್ ಬಾಟಲಿಯಿಂದ ರಾಗಿಣಿ ಗೆಳೆಯರಾದ ಉದ್ಯಮಿ ಶಿವಪ್ರಕಾಶ್ ಚಿಪ್ಪಿ ಹಾಗೂ ಆರ್ ಟಿಒ ಅಧಿಕಾರಿ ರವಿಶಂಕರ್ ಪರಸ್ಪರ ಹೊಡೆದಾಡಿಕೊಂಡಿದ್ದರು. ಈ ಗಲಾಟೆ ರಾಗಿಣಿ ರವಿಶಂಕರ್ ಜೊತೆ ಪಾರ್ಟಿಗೆ ಹೋಗಿದ್ದು ಕಾರಣವಾಗಿತ್ತು.
ಇನ್ನು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ.