ತಿರುವನಂತಪುರ, ಸೆ. 03 (DaijiworldNews/MB) : ಕೊರೊನಾ ಸೋಂಕು ನಿರ್ವಹಣೆಯಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಭಾಷ್ ಎನಿಸಿರುವ ಕೇರಳ ರಾಜ್ಯವು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸ್ಪೂರ್ತಿಯಾಗಿ ಮುಂದುವರೆದಿದೆ. ಬ್ರಿಟಿಷ್ ನಿಯತ ಕಾಲಿಕ ಪ್ರಾಸ್ಪೆಕ್ಟ್, ವಿಶ್ವದ ಅತಿ ಉನ್ನತ ಚಿಂತಕಿಯಾಗಿ ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರನ್ನು ಆಯ್ಕೆ ಮಾಡಿದೆ.
ನ್ಯೂಜಿಲೆಂಡ್ನ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್, ತತ್ವಜ್ಞಾನಿ ಕಾರ್ನೆಲ್ ವೆಸ್ಟ್, ಇತಿಹಾಸಕಾರ ಆಲಿವೆಟ್ ಒಟೆಲ್ ಸೇರಿದಂತೆ ಸುಮಾರು 50 ವ್ಯಕ್ತಿಗಳ ಪಟ್ಟಿಯಲ್ಲಿ ಶೈಲಜಾ ಅವರನ್ನು ಕೂಡಾ ಆಯ್ಕೆ ಮಾಡಲಾಗಿದೆ.
ಕೊರೊನಾ ನಿರ್ವಹಣೆಯಲ್ಲಿ ಕೇರಳದ ಪಾತ್ರ ಹಾಗೂ ಕೈಗೊಂಡ ಕ್ರಮಗಳನ್ನು ಹಲವು ಅಂತರ್ ರಾಷ್ಟ್ರೀಯ ಮಾಧ್ಯಮಗಳು ಶ್ಲಾಘಿಸಿದೆ. ಇನ್ನು ಈ ಮ್ಯಾಗಝೀನ್ ಕೆ ಕೆ ಶೈಲಜಾ ಅವರನ್ನು "ಸರಿಯಾದ ಸ್ಥಳದಲ್ಲಿರುವ ಸರಿಯಾದ ಮಹಿಳೆ" (ರೈಟ್ ವುಮೆನ್ ಇನ್ ರೈಟ್ ಪ್ಲೇಸ್) ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.