ರಾಮಗಢ, ಸೆ. 3(DaijiworldNews/HR): ಮೊಬೈಲ್ ಫೋನ್ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾಗ ಇಬ್ಬರು ಯುವಕರು ಒಂದು ಸಾವಿರ ಅಡಿ ಕಮರಿಗೆ ಬಿದ್ದು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯಲ್ಲಿ ನಡೆದಿದೆ.
ಧಾರ್ ಜಿಲ್ಲೆಯ ದಾಹಿ ನಿವಾಸಿಗಳಾದ ದಿನೇಶ್ (25) ಮತ್ತು ರುವಬಂಟಿ (22) ಮೃತಪಟ್ಟ ಯುವಕರಾಗಿದ್ದಾರೆ.
ರಾಮಗಢದ ಕೋಟೆಯ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ಸಮಯದಲ್ಲಿ ದಟ್ಟವಾದ ಮಂಜು ಇತ್ತು. ಮಂಜಿನಿಂದಾಗಿ ಸರಿಯಾಗಿ ಕಾಣಿಸದೆ ೧೦೦೦ ಅಡಿ ಕಂದಕಕ್ಕೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.