ಹೊಸದಿಲ್ಲಿ, ಸೆ. 3(DaijiworldNews/HR): ದೇಶದ ಅತ್ಯಂತ ದೊಡ್ಡ ಹವಾಲಾ ಜಾಲವನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪತ್ತೆ ಹಚ್ಚಿದ್ದು,ಆರು ದೇಶಗಳಿಗೆ ಬೇಕಾಗಿರುವ ನರೇಶ್ ಕುಮಾರ್ ಜೈನ್ ನನ್ನು ಈಡಿ ಅಧಿಕಾರಿಗಳು ಬಂಧಿಸಿದ್ದಾರೆ.
ನರೇಶ್ ಕುಮಾರ್ ಜೈನ್ , ಯುಕೆ, ಇಟಲಿ, ಸ್ಪೇನ್, ನೆದರ್ಲ್ಯಾಂಡ್ ಮತ್ತು ಯುಎಇ ದೇಶದ ವಾಂಟೆಡ್ ಲಿಸ್ಟ್ ನಲ್ಲಿದ್ದ.
ಇನ್ನೂ ಈತ ಭೂಗತ ಪಾತಕಿಗಳು,ಉದ್ಯಮಿಗಳು, ಡ್ರಗ್ ಮಾಫಿಯಾ ಸೇರಿದಂತೆ ಅನೇಕರಿಗೆ ಒಂದು ಲಕ್ಷ ಕೋಟಿ ರೂಪಾಯಿ ಹವಾಲಾ ಮೂಲಕ ಸರಬರಾಜು ಮಾಡಿದ್ದ ಎಂದು ತಿಳಿದು ಬಂದಿದೆ.
ಈತ ಹಣವನ್ನು ಅಕ್ರಮವಾಗಿ ಸಾಗಿಸಲು ಬಲಸುತ್ತಿದ್ದ 942 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಮತ್ತು 554 ಶೆಲ್ ಕಂಪನಿಗಳನ್ನು ಮತ್ತು ಜೈನ್ ಬಳಸಿದ ಕನಿಷ್ಠ 337 ವಿದೇಶಿ ಬ್ಯಾಂಕ್ ಖಾತೆಗಳನ್ನು ಈಡಿ ಗುರುತಿಸಿದೆ.
ನರೇಶ್ ಕುಮಾರ್ ಜೈನ್( 61) ಹರ್ಯಾಣದ ಪಾಣಿಪತ್ ಮೂಲದವನಾಗಿದ್ದು, ಭಾರತ ಬಿಟ್ಟು ಪರಾರಿಯಾಗಿದ್ದ. 2009ರ ಮೇ ವರೆಗೆ ದುಬೈನಲ್ಲಿದ್ದ ಈತ ಕುಮಾರ್ ಟ್ರೇಡಿಂಗ್ ಕಂಪೆನಿ ಮಾಡಿಕೊಂಡಿದ್ದ. ನಂತರ ಹವಾಲಾ ದಂಧೆಯಲ್ಲಿ ತೊಡಗಿದ್ದ.