ಭದರ್ವಾಹ್,ಸೆ. 3(DaijiworldNews/HR): ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಕೇಂದ್ರ ರಿಸರ್ವ್ ಪೊಲೀಸ್ ಪಡೆಯ (ಸಿಆರ್ಪಿಎಫ್ ) ಸಹಾಯಕ ಸಬ್ ಇನ್ಸ್ ಪೆಕ್ಟರ್ (ಎಎಸ್ಐ) ತಮ್ಮ ಸೇವಾ ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಅಸ್ಸಾಂನ ಭಾರ್ಲಿಪುರ ಗ್ರಾಮದ ನಿವಾಸಿಯಾದ 33ನೇ ಬೆಟಾಲಿಯನ್ನ ಅಮೃತ್ ಭರದ್ವಾಜ್ (52) ಆತ್ಮಹತ್ಯೆ ಮಾಡಿಕೊಂಡಿರುವ ಎಎಸ್ಐ.
ರಾತ್ರಿ ಪಾಳಿ ಕರ್ತವ್ಯದ ಮುಗಿಸಿಕೊಂಡು ಕೋಟ್ಲಿಯ ತಮ್ಮ ಬ್ಯಾರಕ್ಗೆ ಮರಳಿದ ನಂತರ ತಮ್ಮ ಗನ್ನಿಂದ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಕ್ಷಣ ಅವರನ್ನು ಉಪ-ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಷ್ಟರೊಳಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ ಎಂಬುದಾಗಿ ಭದರ್ವಾಹ ಪೊಲೀಸ್ ವರಿಷ್ಠಾಧಿಕಾರಿ ರಾಜ್ಸಿಂಗ್ ಗೌರಿಯಾ ತಿಳಿಸಿದ್ದಾರೆ.
ಇನ್ನು ಕೊರೊನಾ ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆ ಮುಗಿದ ನಂತರ ಶವವನ್ನು ಅವರ ಘಟಕಕ್ಕೆ ಹಸ್ತಾಂತರಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದು, ಭದರ್ವಾಹ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ವಿಭಾಗಗಳಡಿ ಪ್ರಕರಣ ದಾಖಲಾಗಿದೆ.