ಲಡಾಕ್, ಸೆ 03 (DaijiworldNews/PY): ಗಡಿ ವಾಸ್ತವ ರೇಖೆಯ ಉದ್ದಕ್ಕೂ ಭಾರತ-ಚೀನಾ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯದ ನಡುವೆಯೂ, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾಣೆ ಅವರು ಗುರುವಾರ ಲಡಾಖ್ನ ಲೇಹ್ಗೆ ತೆರಳಿದ್ದಾರೆ.
ಸೇನಾ ಮುಖ್ಯಸ್ಥರು ಎರಡು ದಿನಗಳ ಭೇಟಿಯಲ್ಲಿದ್ದು, ಭೇಟಿಯ ಮೊದಲ ದಿನದಂದು ಪೂರ್ವ ಲಡಾಕ್ನ ಪಾಂಗೊಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಮೂರು ಕಾರ್ಯತಂತ್ರದ ಎತ್ತರದಲ್ಲಿ ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ಹಿರಿಯ ಕಮಾಂಡರ್ಗಳು ಸೇನಾ ಮುಖ್ಯಸ್ಥರಿಗೆ ವಿವರಣೆ ನೀಡಲಿದ್ದಾರೆ.
ಮೂರು ತಿಂಗಳಿನಿಂದ ಗಡಿಯಲ್ಲಿ ಬಂಧಿಯಾಗಿ ನಿಲುಗಡೆಯಾಗಿರುವ ಭಾರತೀಯ ಸೇನೆಯ ಸೈನಿಕರ ಕಾರ್ಯಾಚರಣೆಯ ಸನ್ನದ್ಧತೆಯನ್ನು ಸೇನಾ ಮುಖ್ಯಸ್ಥರು ಪರಿಶೀಲಿಸಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.