ನವದೆಹಲಿ,ಸೆ. 3(DaijiworldNews/HR) : ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಆಸರೆಯಾಗಿರುವ ಉದ್ಯೋಗ ಖಾತ್ರಿ ಯೋಜನೆಯನ್ನು ಇದೀಗ ನಗರಗಳಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಸತಿ ಹಾಗೂ ನಗರಾಭಿವೃದ್ಧಿ ಜಂಟಿ ನಿರ್ದೇಶಕ ಸಂಜಯ್ ಕುಮಾರ್, ನರೇಗಾವನ್ನು ಸಣ್ಣ ಮತ್ತು ಮಧ್ಯಮ ನಗರಕ್ಕೆ ವಿಸ್ತರಿಸುವ ಚಿಂತನೆ ಮಾಡಲಾಗಿದ್ದು, ಇದಕ್ಕಾಗಿ 35,068 ಕೋಟಿ ರೂ. ಮೀಸಲಿಡುವುದಾಗಿ ಹೇಳಿದ್ದಾರೆ.
ಕೋವಿಡ್ 19ನಿಂದ ಆಗಿರುವ ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ಸಣ್ಣ ನಗರಗಳಲ್ಲಿ ಮೊದಲು ನರೇಗಾ ಯೋಜನೆಯನ್ನು ಆರಂಭಿಸಲಾಗುವುದು. ರಸ್ತೆ ನಿರ್ಮಾಣ,ಕಟ್ಟಡ ಕಾಮಗಾರಿ, ಗಿಡ ನೆಡುವ ಕೆಲಸಗಳು ಇದರಲ್ಲಿ ಒಳಗೊಂಡಿದ್ದು, ದೇಶದ 270 ಮಿಲಿಯನ್ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತ್ತು. ಈ ಯೋಜನೆಯ ಅನ್ವಯ ಗ್ರಾಮೀಣ ಒಳನಾಡು ಪ್ರದೇಶಗಳಲ್ಲಿ ವರ್ಷಕ್ಕೆ ಕನಿಷ್ಠ 100 ದಿನ ಕೆಲಸದ ಖಾತರಿಯಿದ್ದು, 202 ರೂ. ಕನಿಷ್ಠ ದಿನಗೂಲಿ ನೀಡಲಾಗುತ್ತದೆ.