ಚೆನ್ನೈ, ಸೆ. 04 (DaijiworldNews/MB) : ಖ್ಯಾತ ಗಾಯಕ ಎಸ್ ಪಿ ಬಾಲಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿರವಾಗಿದ್ದು ಈ ವಾರಂತ್ಯದಲ್ಲಿ ಅಥವಾ ಸೋಮವಾರದಂದು ಸಿಹಿ ಸುದ್ದಿ ದೊರೆಯಲಿದೆ ಎಂದು ಎಸ್ಪಿಬಿ ಪುತ್ರ ಚರಣ್ ತಿಳಿಸಿದ್ದಾರೆ.
74 ವರ್ಷದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಆಗಸ್ಟ್ 5ರಂದು ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಈ ಹಿನ್ನೆಲೆ ಗಾನ ಗಂಧರ್ವನ ಉಳಿವಿಗಾಗಿ ದೇಶದಾದ್ಯಂತ ಜನರು ಪ್ರಾರ್ಥಿಸುತ್ತಿದ್ದರು.
ಇದೀಗ ಪುತ್ರ ಚರಣ್ ಪ್ರತಿ ದಿನ ನೀಡುವ ಹೆಲ್ತ್ ಬುಲೆಟಿನ್ನಲ್ಲಿ, ನನ್ನ ತಂದೆಯ ಸ್ಥಿತಿ ಈಗ ಸ್ಥಿರವಾಗಿದೆ. ದೇವರ ಆಶೀರ್ವಾದ ಮತ್ತು ನಿಮ್ಮೆಲ್ಲರ ಪ್ರಾರ್ಥನೆಯಿಂದಾಗಿ ಸೋಮವಾರ ಒಂದು ಶುಭ ಸುದ್ದಿ ದೊರೆಯಲಿದೆ ಎಂದು ನಂಬಿದ್ದೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.
74 ವರ್ಷದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಗಸ್ಟ್ 5ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಸತತ 28 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಅವರು ಬಹುಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.