ಬೆಂಗಳೂರು, ಸೆ. 04 (DaijiworldNews/MB) : ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ವಿಚಾರಣಗೆ ಗೈರು ಹಾಜರಾಗಿದ್ದ ನಟಿ ರಾಗಿಣಿ ದ್ವಿವೇದಿ ಮನೆಯ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ರಾಗಿಣಿ ಗೆಳೆಯ ಜಯನಗರದ ಆರ್ಟಿಒ ಅಧಿಕಾರಿ ರವಿಶಂಕರ್ರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ರಾಗಿಣಿಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. ಆದರೆ ವೈಯಕ್ತಿಕ ನೆಪ ಹೇಳಿ ನಟಿ ರಾಗಿಣಿ, ''ಇವತ್ತು ಬರಲ್ಲ, ವಿಚಾರಣೆಗೆ ಸೋಮವಾರ ಬರ್ತಿನಿ. ನಿನ್ನೆ ನನಗೆ ಬಹಳ ತಡವಾಗಿ ನೋಟಿಸ್ ಸಿಕ್ಕಿತು, ಹೀಗಾಗಿ ಇಂದು ವಿಚಾರಣೆಗೆ ಹಾಜರಾಲು ಸಾಧ್ಯವಾಗುತ್ತಿಲ್ಲ'' ಎಂದು ಟ್ವೀಟ್ ಮೂಲಕ ತಿಳಿಸಿದ್ದರು.
ಇದೀಗ ಸ್ಯಾಂಡಲ್ ವುಡ್ಗೆ ಡ್ರಗ್ಸ್ ನಂಟು ಆರೋಪಕ್ಕೆ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳ್ಳಗೆ ನಟಿ ರಾಗಿಣಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಟಿ ರಾಗಿಣಿ ಮನೆಗೆ ದಿಢೀರನೆ ಬೆಳಗ್ಗೆ 6.30ಕ್ಕೆ ಎರಡು ಕಾರುಗಳಲ್ಲಿ ಸಿಸಿಬಿ ಅಧಿಕಾರಿಗಳು ಆಗಮಿಸಿ ಮನೆಯಲ್ಲಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.