ಮಾಸ್ಕೋ, ಸೆ.4(DaijiworldNews/HR): ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ರಷ್ಯಾಗೆ ಭೇಟಿ ನೀಡಿದ್ದು ಈ ವೇಳೆ ಎಕೆ-47 203 ಉತ್ಪಾದನೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದ್ದು, ಭಾರತದಲ್ಲೇ ಎಕೆ 47 ರೈಫಲ್ ನ ಹೊಸ ಮಾದರಿ ಆಗಿರುವ ಎಕೆ-47 203 ರೈಫಲ್ ಗಳನ್ನು ಉತ್ಪಾದನೆಯ ಮಾಡಲಾಗುತ್ತದೆ.
ಭಾರತದ ಸೇನೆಗೆ 7,70,000 ಎಕೆ-47 203 ರೈಫಲ್ ಗಳ ಅಗತ್ಯವಿದ್ದು, 1 ಲಕ್ಷ ರೈಫಲ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇನ್ನು ಉಳಿದ ರೈಫಲ್ ಗಳನ್ನು ಭಾರತದಲ್ಲೇ ಉತ್ಪಾದಿಸಲಾಗುವುದು ಎಂದು ರಷ್ಯಾದ ಸ್ಪುಟ್ನಿಕ್ ಸುದ್ದಿ ಸಂಸ್ಧೆ ವರದಿ ಮಾಡಿದೆ.
ಇನ್ನು ಇಂಡೋ-ರಷ್ಯಾ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ ಜಂಟಿ ಉದ್ಯಮದ ಮುಂದಾಳತ್ವದಲ್ಲಿ ಭಾರತದಲ್ಲೇ ಎಕೆ-47 203 ರೈಫಲ್ ಗಳನ್ನು ಉತ್ಪಾದಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.