ನವದೆಹಲಿ, ಸೆ 04 (DaijiworldNews/PY): ಭಾರತ-ಚೀನಾ ಗಡಿ ಸಮಸ್ಯೆಗೆ ರಾಜತಾಂತ್ರಿಕ ಮಟ್ಟದಲ್ಲಿ ಪರಿಹಾರ ಪಡೆದುಕೊಳ್ಳುವ ಬಗ್ಗೆ ತಮಗೆ ತಿಳಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಗುರುವಾರ ಆನ್ಲೈನ್ನಲ್ಲಿ ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತಡಿದ ಅವರು, ಸರ್ಕಾರವು ಭಾರತ-ಚೀನಾ ಗಡಿ ಸಮಸ್ಯೆಯ ವಿಚಾರವನ್ನು ಕಡೆಗಣಿಸುತ್ತಿಲ್ಲ. ಈ ಸಮಸ್ಯೆಯು ಪರಿಹಾರವಾಗಬೇಕೆಂದರೆ ಎರಡು ದೇಶಗಳು ಪರಸ್ಪರ ಹೊಂದಾಣಿಕೆಯಲ್ಲಿರಬೇಕು. ಈ ವಿಚಾರ ಇಡೀ ಪ್ರಪಂಚದ ದೃಷ್ಠಿಯಲ್ಲಿ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.
ಚೀನಾದೊಂದಿಗೆ ನಮ್ಮ ಒಪ್ಪಂದವಾಗಿದ್ದು,ಈ ಒಪ್ಪಂದದ ಪ್ರಕಾರವೇ ಉಭಯ ದೇಶಗಳು ನಡೆದುಕೊಳ್ಳುವುದು ಪ್ರಮುಖವಾಗಿದೆ. ಭಾರತ-ಚೀನಾ ಗಡಿ ಸಮಸ್ಯೆಯ ಬಗ್ಗೆ ನಮ್ಮ ಸರ್ಕಾರವು ಸ್ಪಷ್ಟವಾದ ನಿಲುವು ಹೊಂದಿದೆ ಎಂದಿದ್ದಾರೆ.