ಬೆಂಗಳೂರು, ಸೆ 04 (DaijiworldNews/PY): ಡ್ರಗ್ಸ್ ಪ್ರಕರಣ ಸಂಬಂಧ ನಟಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಯಾಂಡಲ್ ವುಡ್ಗೆ ಡ್ರಗ್ಸ್ ನಂಟು ಆರೋಪಕ್ಕೆ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳ್ಳಗೆ ನಟಿ ರಾಗಿಣಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು 3 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದ್ದು ಬಳಿಕ ರಾಗಿಣಿ ಅವರ ಮೊಬೈಲ್, ಕಾರು ಕೀ, ಮನೆ ಕೀ ಹಾಗೂ ರಾಗಿಣಿ ಅವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ರಾಗಿಣಿ ಗೆಳೆಯ ಜಯನಗರದ ಆರ್ಟಿಒ ಅಧಿಕಾರಿ ರವಿಶಂಕರ್ರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ರಾಗಿಣಿಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. ಆದರೆ ವೈಯಕ್ತಿಕ ನೆಪ ಹೇಳಿ ನಟಿ ರಾಗಿಣಿ, ಇವತ್ತು ಬರಲ್ಲ, ವಿಚಾರಣೆಗೆ ಸೋಮವಾರ ಬರ್ತಿನಿ. ನಿನ್ನೆ ನನಗೆ ಬಹಳ ತಡವಾಗಿ ನೋಟಿಸ್ ಸಿಕ್ಕಿತು, ಹೀಗಾಗಿ ಇಂದು ವಿಚಾರಣೆಗೆ ಹಾಜರಾಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮೂಲಕ ತಿಳಿಸಿದ್ದರು.