ಮುಂಬೈ, ಸೆ. 04 (DaijiworldNews/MB) : ನಟಿ ಕಂಗನಾ ರಣಾವತ್ ಟ್ವೀಟ್ ಮೂಲಕ ತನಗೆ ಕೊಲೆ ಬೆದರಿಕೆ ಬಂದಿದೆ ಎಂದು ಹೇಳುವ ಬದಲು ಸಾಕ್ಷ್ಯಾಧಾರಗಳೊಂದಿಗೆ ಪೊಲೀಸರನ್ನು ಸಂಪರ್ಕಿಸಿ ಕೊಲೆ ಬೆದರಿಕೆ ಹಾಕಿದ್ದೇನೆ ಎಂದು ಸಾಬೀತುಪಡಿಸಲಿ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ನಟಿ ಕಂಗನಾ ರಣಾವತ್ ಅವರು ಸಂಜಯ್ ರಾವತ್ ತನಗೆ ಮುಂಬೈ ಪೊಲೀಸರಲ್ಲಿ ನಂಬಿಕೆ ಇಲ್ಲದಿದ್ದರೆ ಮುಂಬೈಗೆ ಬರಬೇಡಿ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಮುಂಬೈ ನನಗೆ ಪಾಕ್ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ. "ಮೂವಿ ಮಾಫಿಯಾ" ಗಿಂತ ಮುಂಬೈ ಪೊಲೀಸರಿಗೆ ತಾನು ಭಯಪಡುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಹಾಗೆಯೇ ಹರಿಯಾಣ ಅಥವಾ ಹಿಮಾಚಲ ಪ್ರದೇಶ ಪೊಲೀಸರಿಂದ ಭದ್ರತೆ ಬೇಕು. 'ಬಾಲಿವುಡ್ನಲ್ಲಿ ಡ್ರಗ್ ಮಾಫಿಯಾ'ವನ್ನು ಬಹಿರಂಗಪಡಿಸಲು ಮುಂಬೈ ಪೊಲೀಸರಿಂದ ಭದ್ರತೆ ಪಡೆಯಲಾರೆ ಎಂದು ಹೇಳಿದ್ದರು.
ಇದೀಗ ಅದಕ್ಕೆ ತಿರುಗೇಟು ನೀಡಿರುವ ರಾವತ್ ಅವರು, ಯಾವುದೇ ಹೆಸರನ್ನು ಉಲ್ಲೇಖ ಮಾಡದೆ, ಟ್ವೀಟರ್ನಲ್ಲಿ ಪೋಸ್ಟ್ ಮಾಡುವ ಬದಲು ಪುರಾವೆಗಳೊಂದಿಗೆ ಪೊಲೀಸರು ಮತ್ತು ಸರ್ಕಾರವನ್ನು ಸಂಪರ್ಕಿಸಬೇಕು" ಎಂದು ಹೇಳಿದ್ದಾರೆ.
ನಟ ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು ನಟಿ ಕಂಗನಾ ಸುಶಾಂತ್ ಆತ್ಮಹತ್ಯೆಯಲ್ಲಿ ಹತ್ಯೆ ಎಂದು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದಾರೆ. ಹಾಗೆಯೇ ಈಗ ಬಾಲಿವುಡ್ನಲ್ಲಿ ಡ್ರಗ್ಸ್ ದಂಧೆಯ ಬಗ್ಗೆಯೂ ಧ್ವನಿ ಎತ್ತಿದ್ದಾರೆ.