ಚಿತ್ರದುರ್ಗ, ಸೆ. 04 (DaijiworldNews/MB) : ನಾಲ್ಕು ಎಕರೆ ಭೂಮಿಯಲ್ಲಿ ಗಾಂಜಾ ಬೆಳೆದಿದ್ದ ಘಟನೆ ಮೊಳಕಾಲ್ಮುರು ತಾಲ್ಲೂಕಿನ ವಡೇರಹಳ್ಳಿಯಲ್ಲಿ ನಡೆದಿದ್ದು ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತರನ್ನು ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ರುದ್ರೇಶ್, ಕೂಡ್ಲಗಿ ತಾಲ್ಲೂಕಿನ ಸುಮಂತ್, ಮೊಳಕಾಲ್ಮುರು ತಾಲ್ಲೂಕಿನ ರಾಂಪುರದ ಮಂಜುನಾಥ್ ಹಾಗೂ ಜಂಬುನಾಥ್ ಎಂದು ಗುರುತಿಸಲಾಗಿದೆ.
ರಾಂಪುರದ ಮಂಜುನಾಥ್ ಎಂಬವರಿಗೆ ಸೇರಿದ ಜಮೀನನ್ನು ರುದ್ರೇಶ್ ಎಂಬಾತ ಗುತ್ತಿಗೆ ಪಡೆದಿದ್ದು ಐದು ಎಕರೆ ಭೂಮಿಗೆ ವರ್ಷಕ್ಕೆ ಒಂದು ಲಕ್ಷ ನೀಡುತ್ತಿದ್ದ. ಈ ಐದು ಎಕರೆ ಪೈಕಿ ನಾಲ್ಕು ಎಕರೆ ಪದೇಶದಲ್ಲಿ ಗಾಂಜಾ ಬೆಳೆಯಲಾಗಿತ್ತು ಎಂದು ವರದಿಯಾಗಿದೆ.
ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು ಸುಮಾರು ಒಂದು ಕೋಟಿ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಲಾಗಿದ್ದು ಈಗ ಈ ಗಾಂಜಾವನ್ನು ಎಲ್ಲಿಗೆ ಪೂರೈಕೆ ಮಾಡಲಾಗುತ್ತಿತ್ತು ಎಂದು ತನಿಖೆ ನಡೆಸಲಾಗುತ್ತಿದೆ.