ಬೆಂಗಳೂರು, ಸೆ. 04 (DaijiworldNews/MB) : ಮಾದಕ ವಸ್ತುವಾದ ಗಾಂಜಾವನ್ನು ತುಳಸಿಗೆ ಹೋಲಿಕೆ ಮಾಡಿ ಅದು ಪವಿತ್ರ ತುಳಸಿಯಂತೆ ಎಂದು ಹೇಳಿದ ನಟಿ ನಿವೇದಿತಾ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಗಾಂಜಾವನ್ನು ತುಳಸಿಗೆ ಹೋಲಿಕೆ ಮಾಡುವುದರಿಂದ ಗಾಂಜಾ ಸೇವನೆಗೆ ಪ್ರೇರಣೆ ನೀಡಿದಂತೆ ಆಗುತ್ತದದೆ. ಆದ್ದರಿಂದ ನಟಿ ನಿವೇದಿತಾ ವಿರುದ್ದ ಕ್ರಮಕೈಗೊಳ್ಳಬೇಕು. ಹಾಗೆಯೇ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಎ. ದೀಪಕ್ ಎಂಬವರು ನೀಡಿದ ದೂರಿನಂತೆ ಎಫ್ಐಆರ್ ದಾಖಲಿಸಲಾಗಿದೆ.
ನಟಿ ನಿವೇದಿತಾ, 'ಅಥರ್ವ ವೇದದಲ್ಲಿ ಗಾಂಜಾ ಬಗ್ಗೆ ಉಲ್ಲೇಖಿಸಲಾಗಿದೆ. ಗಾಂಜಾ ಆಯುರ್ವೇದದ ಬೆನ್ನೆಲುಬು. ಫಕೀರರಿಂದ ಹಿಡಿದು ಕೆಳಸ್ತರದಲ್ಲಿ ಇರುವವರು ಬೇರೆ ಬೇರೆ ಕಾರಣಕ್ಕೆ ಗಾಂಜಾ ಸೇವಿಸುತ್ತಾರೆ. ಗಾಂಜಾವು ಏಡ್ಸ್ ಕಾಯಿಲೆಯನ್ನು ಗುಣಪಡಿಸುವ ಗುಣ ಹೊಂದಿದೆ. ಶಿವನ ಪೂಜೆ ಗಾಂಜಾ ಎಲೆ ಇಲ್ಲದೆ ಸಮಾಪ್ತಿಯಾಗದು. ಕ್ವೀನ್ ಎಲಿಜಬೆತ್ ಕೂಡ ಗಾಂಜಾ ಸೇವಿಸುತ್ತಿದ್ದರು. ಯೋಗಿ ಆದಿತ್ಯನಾಥ್ ಅವರು ಗಾಂಜಾ ಪರವಾಗಿ (ಉತ್ತಮವಾಗಿ ಬಳಕೆ ಮಾಡುವ ವಿಚಾರವಾಗಿ) ಮಾತನಾಡಿದ್ದಾರೆ. ಇದು ಕಾನೂನು ಬದ್ದವಾದರೆ ಅಪರಾಧ ಕಡಿಮೆಯಾಗುತ್ತದೆ. ಗಾಂಜಾ ಔಷಧಿ ಗುಣವುಳ್ಳ ಸಸಿ. ತುಳಸಿ ತರವೇ ಅದನ್ನು ಬಳಕೆ ಮಾಡಬಹುದು ಎಂದು ಹೇಳಿದ್ದರು. ಹಾಗೆಯೇ ಗಾಂಜಾದಿಂದ ಅಪರಾಧ ಆಗೋದಿಲ್ಲ. ಗಾಂಜಾಕ್ಕೆ ಮಸಿ ಬಳೆದು ಬ್ಯಾನ್ ಮಾಡಲಾಗಿದೆ ಎಂದು ಕೂಡಾ ಹೇಳಿದ್ದರು.