ಮೈಸೂರು, ಸೆ 04 (DaijiworldNews/PY): ಆಟವಾಡುತ್ತಾ ರಿಮೋಟ್ಗೆ ಉಪಯೋಗಿಸುವ ಸೆಲ್ ನುಂಗಿ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಮೈಸೂರಿನ ಇಟ್ಟಿಗೆಗೂಡಿನಲ್ಲಿ ನಡೆದಿದೆ.
ಮೃತಪಟ್ಟ ಮಗುವನ್ನು ಹೇಂತ್ ಸ್ಕಂದಮಣಿರಾಜ್ ಎನ್ನಲಾಗಿದೆ.
ಮನೆಯಲ್ಲಿ ಆಡವಾಡುತ್ತಿದ್ದ ಮಗು ರಿಮೋಟ್ನ ಸೆಲ್ ಅನ್ನು ನುಂಗಿದೆ. ಇದನ್ನು ನೋಡಿದ ಪೋಷಕರು ತಕ್ಷಣವೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಮಗು ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದೆ.
ಘಟನೆಯ ಬಗ್ಗೆ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.