ಮಾಸ್ಕೋ, ಸೆ. 05 (DaijiworldNews/MB) : ಲಡಾಖ್ ಗಡಿ ಉದ್ವಿಗ್ನತೆ ಬಳಿಕ ಇದೇ ಮೊದಲ ಬಾರಿಗೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾದ ರಕ್ಷಣಾ ಸಚಿವ ವೀ ಫೆಂಗೆ ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ.
ಷ್ಯಾದ ಮಾಸ್ಕೋದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗಸಭೆ(ಎನ್ಸಿಒ)ಯಲ್ಲಿ ಭಾರತ ಹಾಗೂ ಚೀನಾ ದೇಶದ ರಕ್ಷಣಾ ಸಚಿವರು ಪರಸ್ಪರ ಭೇಟಿಯಾಗಿದ್ದು ಚರ್ಚೆ ನಡೆಸುತ್ತಿದ್ದಾರೆ.
ಮಾತುಕತೆಗೆ ಪ್ರಥಮವಾಗಿ ಚೀನಾ ರಕ್ಷಣಾ ಸಚಿವರು ಆಹ್ವಾನಿಸಿದ್ದು ಈ ಆಹ್ವಾನವನ್ನು ಭಾರತ ರಕ್ಷಣಾ ಸಚಿವರು ರಾಜನಾಥ್ ಸಿಂಗ್ ಪುರಸ್ಕರಿಸಿದ್ದರು.
ವಿದೇಶಿ ನೆಲದಲ್ಲಿ ನಡೆಯುತ್ತಿರುವ ಈ ಮಾತುಕತೆಯು ವಿಶೇಷ ಮಹತ್ವವನ್ನು ಹೊಂದಿದ್ದು ಉಭಯ ದೇಶದ ನಾಯಕರು ಗಡಿ ಘರ್ಷಣೆ ಬಗ್ಗೆ ರಾಜತಾಂತ್ರಿಕ ಮಾತುಗಳು ನಡೆಸಿದ್ದಾರೆ ಎಂದು ಹೇಳಲಾಗಿದೆ.