ಉತ್ತರ ಪ್ರದೇಶ, ಸೆ.05(DaijiworldNews/HR): ಆನ್ ಲೈನ್ ಮ್ಯಾಚಿಂಗ್ ಸೈಟ್ ಗಳನ್ನು ನೋಡಿ ಶ್ರೀಮಂತ ಮಧ್ಯಮ ವರ್ಗದ ವರನನನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಈ ಮಹಿಳೆ 10 ವರ್ಷದಲ್ಲಿ 8 ಮುದುಕರನ್ನು ಮದುವೆಯಾಗಿ ಕೈಕೊಟ್ಟು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು. ಇದೀಗ ಮಹಿಳೆಗಾಗಿ ಉತ್ತರ ಪ್ರದೇಶ ಪೊಲೀಸರು ಮಹಿಳೆಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಆರೋಪಿಯನ್ನು ಮೋನಿಕಾ ಎಂದು ಗುರುತಿಸಲಾಗಿದ್ದು, ಆಕೆಗೆ ಮುದುಕರೇ ಟಾರ್ಗೆಟ್. 66 ವರ್ಷದ ವ್ಯಕ್ತಿಯನ್ನು 8ನೇ ಮದುವೆಯಾಗಿದ್ದಳು.
ಆತನ ಬಳಿಯಿದ್ದ 15 ಲಕ್ಷ ರೂಪಾಯಿ ಮೌಲ್ಯದ ಆಭರಣ ದೋಚಿ ಪರಾರಿಯಾಗಿದ್ದಾಳೆ. ಆತನ ಪತ್ನಿ ಒಂದು ವರ್ಷದ ಹಿಂದೆ ಸಾವನ್ನಪ್ಪಿದ್ದು ಆಕೆ ಸಾವಿನ ನಂತ್ರ ಏಕಾಂಗಿಯಾಗಿದ್ದ ವ್ಯಕ್ತಿ ಖನ್ನಾ ಮದುವೆ ಕೇಂದ್ರದಲ್ಲಿ ಹುಡುಗಿ ಹುಡುಕಾಟ ನಡೆಸಿ ಅಲ್ಲಿ ಮೋನಿಕಾ ಸಿಕ್ಕಿದ್ದಳು. ವಿಚ್ಛೇದಿತೆ ಎನ್ನುತ್ತ ಆಕೆ ಈತನನ್ನು ಮದುವೆಯಾಗಿದ್ದಳು. ಆದರೆ ಮದುವೆಯಾದ ಎರಡೇ ತಿಂಗಳಿಗೆ ಕಾಲ್ಕಿತ್ತಿದ್ದಾಳೆ. ನಂತರ ಪೊಲೀಸರಿಗೆ ದೂರು ನೀಡಿದ ಆತ ಪತ್ತೆ ಮಾಡಿದ್ದಾನೆ. ಬಳಿಕ ಆಕೆ 10 ವರ್ಷದಲ್ಲಿ 8 ಮಂದಿಯನ್ನು ಮದುವೆಯಾಗಿದ್ದಾಳೆಂಬುದು ಗೊತ್ತಾಗಿದೆ.