ಹೈದರಾಬಾದ್ ,ಸೆ.05(DaijiworldNews/HR): ತೆಲಂಗಾಣ ವಿಧಾನಸಭೆ ಮುಂಗಾರು ಅಧಿವೇಶನಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿ ಇರುವಾಗಲೇ ತೆಲಂಗಾಣ ಹಣಕಾಸು ಸಚಿವ ಟಿ ಹರೀಶ್ ರಾವ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಸೆಪ್ಟಂಬರ್ 7ರಿಂದ ತೆಲಂಗಾಣ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಹರೀಶ್ ರಾವ್ ಅವರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಹರೀಶ್ ಸೇರಿದಂತೆ ಅನೇಕ ಸಚಿವರುಗಳು ನಿರಂತರವಾಗಿ ಸಾರ್ವಜನಿಕರ ಸಂಪರ್ಕದಲ್ಲಿದ್ದರು. ಯಾವಾಗಲೂ ಮಾಸ್ಕ್ ಧರಿಸುತ್ತಿದ್ದರೂ ಮತ್ತು ಎಲ್ಲಾ ಮುಂಜಾರೂಕಾ ಕ್ರಮಗಳನ್ನು ಕೈಗೊಂಡರು ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಹರೀಶ್ ರಾವ್ ಗೆ ಸಣ್ಣ ಪ್ರಮಾಣದಲ್ಲಿ ಕೊರೊನಾ ಗುಣ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿದಾಗ ಕೊರೊನಾ ದೃಢ ಪಟ್ಟಿದೆ. ಹರೀಶ್ ರಾವ್ ಅವರ ಅನುಪಸ್ಥಿತಿಯಲ್ಲಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರೇ ವಿಧಾನಸಭೆಯಲ್ಲಿ ಹಣಕಾಸು ಇಲಾಖೆ ಕೆಲಸ ನಿರ್ವಹಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.