ಲಕ್ನೋ, ಸೆ. 05 (DaijiworldNews/MB) : ಕಳ್ಳತನದ ಶಂಕೆಯಲ್ಲಿ ಯುವಕನೋರ್ವನನ್ನು ಗಾರ್ಡ್ಗಳು ಹಾಗೂ ಸ್ಥಳೀಯರು ಹಿಡಿದು ಆತನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಮೃತ ಯುವಕ ೩೪ ವರ್ಷದ ವಾಸಿದ್ ಮಾದಕ ವ್ಯಸನಿಯಾಗಿದ್ದು ಆತನನ್ನು ಮರದ ಕಾಂಡಕ್ಕೆ ಕಟ್ಟಿಹಾಕಿ ಥಳಿಸಲಾಗಿದೆ. ಆತನ ವಿರುದ್ದ ಸರಕಾರಿ ಕಚೇರಿಯಲ್ಲಿ ಕಳ್ಳತನ ಮಾಡಿದ ಆರೋಪವಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಆತ ತನ್ನನ್ನು ಹತ್ಯೆಗೈಯದಂತೆ ಅಂಗಲಾಚಿದ್ದು ಆ ಸಂದರ್ಭದಲ್ಲಿ ಅಲ್ಲಿದ್ದ ಜನರು ವಿಡಿಯೋಗಳನ್ನು ತೆಗೆದು, ಹಾಸ್ಯ ಮಾಡಿದ್ದಾರೆ ಎಂದು ವರದಿಯಾಗಿದೆ.
ಮೊದಲು ಇಬ್ಬರು ಗಾರ್ಡ್ಗಳು ಆತನನ್ನು ಹಿಡಿದಿದ್ದು ಬಳಿಕ ಗಾರ್ಡ್ಗಳು ಹಾಗೂ ಸ್ಥಳೀಯರು ಸೇರಿ ಅವನನ್ನು ಕಟ್ಟಿಹಾಕಿ ಥಳಿಸಿದ್ದಾರೆ. ಬಳಿಕ ಆತನನ್ನು ಪೊಲೀಸ್ ಠಾಣೆಗ ಕರೆದೊಯ್ದಿದ್ದು ಅಷ್ಟರಲ್ಲಿ ಕಳ್ಳತನಕ್ಕೊಳಗಾದ ವ್ಯಕ್ತಿ ಕಳೆದು ಹೋದ ತನ್ನ ವಸ್ತು ದೊರೆತಿದೆ ಎಂದು ಹೇಳಿ ಆತನ ವಿರುದ್ದ ದೂರು ದಾಖಲಿಸದಂತೆ ತಿಳಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ವಾಸಿದ್ ಪೊಲೀಸ್ ಠಾಣೆಯಿಂದ ಹೊರ ಬಂದ ಕೆಲವೇ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಬರೇಲಿಯ ಎಸ್ಪಿ ಸನ್ಸಾರ್ ಸಿಂಗ್ ತಿಳಿಸಿದ್ದಾರೆ.