ಮೈಸೂರು, ಸೆ. 05 (DaijiworldNews/MB) : ದೇವರ ಆಟ ಏನೋ ತಿಳಿದಿಲ್ಲ, ಆದರೆ ದೆವ್ವಗಳಂತೂ ದೇಶ ಆಳುತ್ತಿದೆ ಎಂದು ಸಾಹಿತಿ ದೇವನೂರ ಮಹಾದೇವ ಅವರು ಸರ್ಕಾರದ ವಿರುದ್ದ ಚಾಟಿ ಬೀಸಿದ್ದಾರೆ.
ಭೂಸುಧಾರಣಾ ಕಾಯ್ದೆ ತಿದ್ದುಪಡಿ- ಖಾಸಗೀಕರಣ ನೀತಿಗಳು ಪರಿಣಾಮ ಮತ್ತು ಸವಾಲುಗಳು ಕುರಿತ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ''ಭಾರತ ದೇಶವು ಕೊರೊನಾ ಎಂಬ ದೇವರ ಆಟದಿಂದ ರಾಜ್ಯಗಳಿಗೆ ನೀಡಬೇಕಾದ ಮೊತ್ತ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವ ವಿತ್ತ ಸಚಿವೆಯನ್ನು ಹೊಂದಿದೆ'' ಎಂದು ನಿರ್ಮಲಾ ಸೀತರಾಮನ್ನ್ನು ಲೇವಡಿ ಮಾಡಿದ ಅವರು, ''ದೇಶದಾದ್ಯಂತ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುವ ಜಿಎಸ್ಟಿ ತಂದು ದೆವ್ವದ ಆಟ ಆಡಿದವರು ಯಾರು'' ಎಂದು ಪ್ರಶ್ನಿಸಿದರು.
''ಜನರು ಸಂಕಷ್ಟದಲ್ಲಿ ಧ್ವನಿ ಎತ್ತಲು ಸಾಧ್ಯವಾಗದ ಈ ಸಂದರ್ಭವನ್ನು ದುರ್ಬಳಕೆ ಮಾಡಿ ಖಾಸಗಿ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಎಲ್ಲಾ ಲಾಭ ಒದಗಿಸುವ ಕಾಯ್ದೆಯನ್ನು ಜಾರಿಗೆ ತರುವ ಯತ್ನವನ್ನು ಈ ಸರ್ಕಾರ ಮಾಡುತ್ತಿದೆ. ಈ ಸರ್ಕಾರ ಜನವಿರೋಧಿಯಾಗಿದೆ'' ಎಂದು ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು.