ಹೈದರಾಬಾದ್, ಸೆ 05 (DaijiworldNews/PY): ಹುಟ್ಟಿದ ಒಂದೇ ದಿನದಲ್ಲಿ ತಂದೆಯೋರ್ವ ಅವಳಿ ಹೆಣ್ಣು ಮಕ್ಕಳಿಗೆ ವಿಷವುಣಿಸಿದ ಅಮಾನವೀಯ ಘಟನೆ ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಗಂಡೀಡ್ ಮಂಡಲದ ನಾಂಚೆರ್ಲಾದಲ್ಲಿ ನಡೆದಿದೆ.
ದಂಪತಿಗಳಿಗೆ ಮದುವೆಯಾಗಿ ಅನೇಕ ವರ್ಷಗಳಾದರೂ ಮಕ್ಕಳಾಗದೇ ಇದ್ದು, ಪೂಜೆ, ವ್ರತ ಮಾಡಿದ್ದಾರೆ. ಹೀಗಿರುವಾಗ ಹುಟ್ಟಿದ ಮಕ್ಕಳಿಗೆ ತಂದೆಯೇ ವಿಷವುಣಿಸಿದ್ದಾನೆ.
ಘಟನೆಯ ಬಗ್ಗೆ ತಿಳಿದ ತೆಲಂಗಾಣ ಸಚಿವ ವಿ ಶ್ರೀನಿವಾಸ್ ಗೌಡ ಆಸ್ಪತ್ರೆಗೆ ಧಾವಿಸಿದ್ದು, ಎಷ್ಟೇ ಖರ್ಚಾದರೂ ಪರವಾಗಿಲ್ಲ, ಮಕ್ಕಳ ಜೀವ ಉಳಿಸಿ ಎಂದು ವೈದ್ಯರಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ ತಂದೆಗೆ ಓರ್ವ ಹೆಣ್ಣು ಮಗುವಿದ್ದು, ಎರಡನೇ ಬಾರಿಯೂ ಕೂಡಾ ಅವಳಿ ಹೆಣ್ಣು ಮಕ್ಕಳಾದ ಕಾರಣ ಆತ ಮಕ್ಕಳಿಗೆ ವಿಷವುಣಿಸಿದ್ದಾನೆ.
ಈ ಬಗ್ಗೆ ಆತನ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವ ಶ್ರೀನಿವಾಸ್ ಗೌಡ ಪೊಲೀಸರಿಗೆ ತಿಳಿಸಿದ್ದಾರೆ.