ಭುವನೇಶ್ವರ, ಸೆ.05(DaijiworldNews/HR): ಭಾರತದ 130 ಕೋಟಿ ಜನರ ಜೀವ ಉಳಿಸಲು ಲಾಕ್ಡೌನ್ ಮಾಡುವ ಜತೆಗೆ ಗಟ್ಟಿ ನಿರ್ಧಾರ ಕೈಗೊಂಡು ಆರ್ಥಿಕತೆಯನ್ನು ಕಾಪಾಡುವ ದೊಡ್ಡ ಕೆಲಸವನ್ನು ಎನ್ಡಿಎ ಸರ್ಕಾರ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ವಿಶ್ವವೇ ಕೊರೊನಾ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ನಮ್ಮ ದೇಶದ ಜನರ ಜೀವ ಉಳಿಸುವ ಸಲುವಾಗಿ ದೇಶವನ್ನೇ ಲಾಕ್ಡೌನ್ ಮಾಡುವ ಅನಿವಾರ್ಯವಾಗಿತ್ತು. ಇದು ಅಷ್ಟು ಸುಲಭದ ನಿರ್ಧಾರವಾಗಿರಲಿಲ್ಲ. ಮುಂದಿನ ಎಲ್ಲಾ ಆಲೋಚನೆಯನ್ನು ಬದಿಗಿಟ್ಟು ಗಟ್ಟಿ ನಿರ್ಧಾರವನ್ನು ಮಾಡಬೇಕಾಯಿತು ಎಂದು ನಡ್ಡಾ ತಿಳಿಸಿದ್ದಾರೆ.
ಭಾರತ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಜನರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿತ್ತು. ಇದರಿಂದ ಜೀವ ಉಳಿಸುವ ಕಾರ್ಯವೂ ಆಗಿದೆ ಎಂದರು.
ಈ ಕಾರ್ಯಕ್ಕೆ ವಿಶ್ವಸಂಸ್ಥೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆರ್ಥಿಕತೆ ಕುಸಿದರೂ ಕೂಡ ನಮ್ಮ ಜನರ ಆತ್ಮವಿಶ್ವಾಸ ಕುಸಿದಿಲ್ಲ ಎಂಬುದನ್ನು ತೋರಿಸಲಾಗುವುದು ಎಂದು ವಿರೋಧ ಪಕ್ಷಗಳಿಗೆ ನಡ್ಡಾ ತಿರುಗೇಟು ನೀಡಿದ್ದಾರೆ.