ನವದೆಹಲಿ, ಸೆ.05(DaijiworldNews/HR): ಲಡಾಖ್ನ ಗಡಿಯ ವಿಚಾರದಲ್ಲಿ ಭಾರತ ಮತ್ತು ಚೀನಾದೊಂದಿಗೆ ಪದೇ ಪದೇ ನಡೆಯುತ್ತಿರುವ ಮಾತುಕತೆಯ ಫಲಿತಾಂಶವನ್ನು ಜನತೆ ತಿಳಿಯಬೇಕು ಎಂದು ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಒತ್ತಾಯಿಸಿದೆ.
ಈ ಬಗ್ಗೆ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ವೀಡಿಯೊದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ , ಭಾರತ-ಚೀನಾ ಗಡಿಯಲ್ಲಿ ಇದು ವಿಶೇಷ ಪರಿಸ್ಥಿತಿಯಾಗಿದೆ. "1962 ರಿಂದ ಈ ರೀತಿಯ ಪರಿಸ್ಥಿತಿಯನ್ನು ನಾವು ಎಂದಿಗೂ ಹೊಂದಿರಲಿಲ್ಲ"ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರೀಂಗ್ಲಾ ಅವರ ಹೇಳಿಕೆಯನ್ನು ಸುರ್ಜೆವಾಲಾ ಉಲ್ಲೇಖಿಸಿದ್ದಾರೆ. "ನಮ್ಮ ಸರ್ಕಾರವು ಚೀನಾದ ಸಹವರ್ತಿಗಳೊಂದಿಗೆ ಪದೇ ಪದೇ ನಡೆಸಿದ ಸಂಭಾಷಣೆಯ ಫಲಿತಾಂಶವೇನು ಎಂಬುದು ಮುಖ್ಯವಾಗಿದೆ. ಚೀನಾದ ಗಡಿ ಉಲ್ಲಂಘನೆಗಳನ್ನು ಹಿಮ್ಮೆಟ್ಟಿಸಲಾಗಿದೆ ಎಂದು ನಾವು ಹೇಗೆ ಖಚಿತಪಡಿಸಿಕೊಳ್ಳಬಹುದು ಎಂಬುವುದಾಗಿ ಪ್ರಶ್ನಿಸಿದ್ದಾರೆ.
ಇನ್ನು ನಮ್ಮ ತಾಯಿನಾಡನ್ನು ಪುನಃ ಪಡೆದುಕೊಳ್ಳಲು ಚೀನಿಯರನ್ನು ಹೇಗೆ ಹಿಮ್ಮೆಟ್ಟಿಸಲಾಗುತ್ತದೆ ಎಂಬ ಪ್ರಶ್ನೆಗಳಿಗೆ ಜನರು ಉತ್ತರಗಳನ್ನು ಬಯಸುತ್ತಿದ್ದಾರೆ ಎಂದು ಅವರು ಹೇಳಿದರು.