ಬೆಂಗಳೂರು, ಸೆ 05 (DaijiworldNews/PY): ರಾಜ್ಯದಲ್ಲಿ ಸುಮಾರು 20,000 ಅತಿಥಿ ಶಿಕ್ಷಕರಿಗೆ ಸಂಬಳವನ್ನೇ ನೀಡಿಲ್ಲ, ಖಾಸಗಿ ಶಾಲಾ ಶಿಕ್ಷಕರನ್ನು ಕೇಳುವವರೇ ಇಲ್ಲ. ಸುರೇಶ್ ಕುಮಾರ್ ಅವರೇ, ಮೊದಲು ಈ ಶಿಕ್ಷಕರಿಗೆ 'ಧನಾಗಮ'ದ ಕರುಣೆ ತೋರಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಸುಮಾರು 20,000 ಅತಿಥಿ ಶಿಕ್ಷಕರಿಗೆ ಸಂಬಳವನ್ನೇ ನೀಡಿಲ್ಲ, ಖಾಸಗಿ ಶಾಲಾ ಶಿಕ್ಷಕರನ್ನು ಕೇಳುವವರೇ ಇಲ್ಲ. ಸುರೇಶ್ ಕುಮಾರ್ ಅವರೇ, ಮೊದಲು ಈ ಶಿಕ್ಷಕರಿಗೆ 'ಧನಾಗಮ'ದ ಕರುಣೆ ತೋರಿ, ಆ ಮೇಲೆ ನಿಮ್ಮ 'ವಿದ್ಯಾಗಮ'ದ ಪ್ರಚಾರ ನಡೆಯಲಿ ಎಂದಿದ್ದಾರೆ.
ಶಿಕ್ಷಕರಿಗೆ ಸಂಬಳ ನೀಡಲು ಹಣಕಾಸು ಕೊರತೆಯ ನೆಪಹೇಳುತ್ತಿದೆ ಬಿಜೆಪಿ ಸರ್ಕಾರ. ಸಾಲ ಮಾಡಿಯೇ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿ ಅವರಿಗೆ ಶಿಕ್ಷಕರ ಸಂಬಳಕ್ಕೂ ಸಾಲ ಮಾಡಲು ಹೇಳಿ ಸುರೇಶ್ ಕುಮಾರ್ ಅವರೇ ಎಂದು ಹೇಳಿದ್ದಾರೆ.