ಬೆಂಗಳೂರು, ಸೆ 6(DaijiworldNews/HR): ಡ್ರಗ್ಸ್ ದಂಧೆ ಪ್ರಕರಣದಲ್ಲಿ ರಾಗಿಣಿ ಜೊತೆ ನಾನೂ ಆರೋಪಿ ಎಂದು ಯುವಕನೊಬ್ಬ ಸಿಸಿಬಿ ಕಚೇರಿಗೆ ಬಂದು ಬಂಧಿತನಾದ ಘಟನೆ ನಡೆದಿದೆ.
ಅನಿರುದ್ಧ್ ಎಂಬ ಯುವಕ ಬೈಕ್ ನಲ್ಲಿ ಸಿಸಿಬಿ ಕಚೇರಿಗೆ ಬಂದು ರಾಗಿಣಿ ಜತೆ ಫೋಟೋದಲ್ಲಿರುವ ವ್ಯಕ್ತಿ ನಾನೇ. ನಾನು ಆರೋಪಿ ನಂ.13. ನನ್ನನ್ನೂ ಬಂಧಿಸಿ ಎಂದು ಆತ ಹೇಳಿದ್ದಾನೆ.
ಮಾದಕ ವಸ್ತು ಪೂರೈಕೆ ಜಾಲದ ಕುರಿತಂತೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ನಟಿ ರಾಗಿಣಿ ದ್ವಿವೇದಿಯನ್ನು ಬಂಧಿಸಿದ್ದಾರೆ. ಸದ್ಯ ಇವರು ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ವಶದಲ್ಲಿರಲಿದ್ದು, ಈ ನಡುವೆಯೇ ಯುವಕ ಕಚೇರಿ ಎದುರು ಬಂದು ಹೈಡ್ರಾಮಾ ಮಾಡಿದ್ದಾನೆ ಬಳಿಕ ಆತನನ್ನು ವಿಚಾರಣೆಗೆ ಕರೆದೊಯ್ಯಲಾಗಿದೆ.
ಇಲ್ಲಿಯವರೆಗೆ ಪ್ರಕರಣದಲ್ಲಿ ಒಟ್ಟು 12 ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದ್ದು, 13ನೆಯವ ನಾನೇ ಎಂದಿರುವ ಯುವಕ, ನನ್ನನ್ನು ಅರೆಸ್ಟ್ ಮಾಡಿ ಎಂದು ಕೇಳಿಕೊಂಡಿದ್ದಾನೆ. ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.