ನವದೆಹಲಿ, ಸೆ 06 (DaijiworldNews/PY): ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ, ಆಂಧ್ರಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಶೇ.46ರಷ್ಟು ಸಕ್ರಿಯ ಕೊರೊನಾ ಪ್ರಕರಣಗಳು ಹಾಗೂ ಶೇ.52ರಷ್ಟು ಸಾವು ಸಂಭವಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಕೊರೊನಾ ವ್ಯಾಪಿಸುವುದನ್ನು ನಿಯಂತ್ರಿಸಲು ವಿವಿಧ ಹಂತಗಳಲ್ಲಿ ಸಮರ್ಥ ಮೇಲ್ವಿಚಾರಣೆಯೊಂದಿಗೆ ಉನ್ನತ ಪರೀಕ್ಷೆ, ಕ್ಲಿನಿಕಲ್ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಲ್ಲಿ ವರಿಯಾದ ಪ್ರಕರಣಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಶೇ.46ರಷ್ಟು ಇದೆ. ಮಹಾರಾಷ್ಟ್ರದಲ್ಲೆ ಶೇ.22ರಷ್ಟು ಇದೆ. ಅಲ್ಲದೇ, ಈ ಮೂರು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕಾವಾಗುತ್ತಿವೆ ಎಂದು ಹೇಳಿದೆ.
ಕರ್ನಾಟಕಕ್ಕೆ ಸಂಬಂಧಸಿದಂತೆ, ಕೊಪ್ಪಳ, ಮೈಸೂರು, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಆರ್ಟಿಪಿಸಿಆರ್ ಪರೀಕ್ಷಾ ಸೌಲಭ್ಯಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು, ಮನೆ-ಮನೆ ತಪಾಸಣೆ ಹಾಗೂ ಆರೋಗ್ಯ ಕಾರ್ಯಕರ್ತರನ್ನು ಸೋಂಕಿನಿಂದ ರಕ್ಷಿಸಲು ಸರ್ಕಾರಗಳಿ ನಿಗಾವಹಿಸುವಂತೆ ಸಚಿವಾಲಯ ಸೂಚಿಸಿದೆ.