ಮುಂಬೈ, ಸೆ 06 (DaijiworldNews/PY): ನಟಿ ಕಂಗನಾ ರನೌತ್ ಮಹಾರಾಷ್ಟ್ರವನ್ನು ಮಿನಿ ಪಾಕಿಸ್ತಾನ ಎಂದಿದ್ದು, ಅವರಿಗೆ ಅಹಮದಾಬಾದ್ ಬಗ್ಗೆ ಮಾತನಾಡುವ ಧೈರ್ಯ ಇದೆಯೇ ಎಂದು ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಕೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಹುಡುಗಿ (ಕಂಗನಾ) ಮಹಾರಾಷ್ಟ್ರದ ಜನತೆಯಲ್ಲಿ ಕ್ಷಮೆಯಾಚಿಸಿದರೆ, ನಾನು ಕ್ಷಮೆಯಾಚಿಸುವ ಬಗ್ಗೆ ಯೋಚಿಸುತ್ತೇನೆ ಎಂದಿದ್ದಾರೆ.
ಇತ್ತೀಚೆಗೆ ಕಂಗಾನ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದು ಅಲ್ಲದೇ, ಟ್ವೀಟ್ ಮೂಲಕ ಮುಂಬೈ ಪೊಲೀಸರನ್ನೂ ಟೀಕೆ ಮಾಡಿದ್ದರು. ಇವರ ಹೇಳಿಕೆ ಪ್ರತಿಕ್ರಿಯೆ ನೀಡಿದ್ದ ಸಂಜಯ್ ರಾವತ್ ಅವರು ಹರಾಮ್ಕೋರ್ ಲಡಕಿ ಎಂದಿದ್ದರು.