ನವದೆಹಲಿ, ಸೆ 06 (DaijiworldNews/PY): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿಯ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಅವರನ್ನು ಇನ್ನೂ 9 ದಿನಗಳ ಕಾಲ ವಶಕ್ಕೆ ನೀಡುವಂತೆ ಜಾರಿ ನಿರ್ದೇಶನಾಲಯ ಮನವಿ ಮಾಡಿದೆ.
ಹುಸೇನ್ ವಿರುದ್ದ ವಂಚನೆ ಸೇರಿದಂತೆ ಫೋರ್ಜರಿ, ಅಪರಾಧ ಸಂಚು ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ ದಾಖಲಿಸಿದ್ದು, ಇದರ ವಿಚಾರಣೆಯ ಹಿನ್ನೆಲೆ ಹುಸೇನ್ ಅವರನ್ನು 6 ದಿನಗಳ ಕಾಲ ಇ.ಡಿ ವಶಕ್ಕೆ ನೀಡಲಾಗಿತ್ತು.
ಹೆಚ್ಚುವರಿ ಸೆಷೆನ್ಸ್ ಜಡ್ಜ್ ಅಮಿತಾಭ್ ರಾವತ್ ಅವರು ಇ.ಡಿ ಮನವಿಯ ವಿಚಾರಣೆ ನಡೆಸಿದ್ದು, ತೀರ್ಪನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.
ಏತನ್ಮಧ್ಯೆ ಹುಸೇನ್ ಮೇಲೆ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪವೂ ಇದೆ. ಅಲ್ಲದೇ, ಗುಪ್ತಚರ ದಳದ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೂ ಆಗಿದ್ದಾರೆ.