ಹೈದರಾಬಾದ್, ಸೆ 6(DaijiworldNews/HR): ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಗ್ರಾಹಕರಿಗೆ ಪೆಟ್ರೋಲ್ ಪಂಪ್ಗಳಲ್ಲಿ ಇಂಧನ ಪೂರೈಸುವ ಯಂತ್ರಗಳಲ್ಲಿ ಮೋಸವೆಸಗುತ್ತಿದ್ದ 33 ಪೆಟ್ರೋಲ್ ಬಂಕ್ಗಳನ್ನು ಸೈಬರಬಾದ್ ಪೊಲೀಸರು ಸೀಜ್ ಮಾಡಿದ್ದಾರೆ.
ಪೆಟ್ರೋಲ್ ಬಂಕ್ನಲ್ಲಿ ಇಂಧನ ತುಂಬುವಾಗ ಮೀಟರ್ನಲ್ಲಿ ಕೈಚಳಕ ತೋರುವಂತೆ ಎಲೆಕ್ಟ್ರಾನಿಕ್ಸ್ ಚಿಪ್ ಬಳಸುತ್ತಿದ್ದ ಅಂತಾರಾಜ್ಯ ಖದೀಮರ ಗ್ಯಾಂಗ್ ಬಂಧಿಸಿದ ಬೆನ್ನಲ್ಲೇ 33 ಪೆಟ್ರೋಲ್ ಬಂಕ್ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಈ ಗ್ಯಾಂಗ್ ಬಂಕ್ಗಳಲ್ಲಿ ಇಂಧನ ತುಂಬುವ ಯಂತ್ರಕ್ಕೆ ಇಂಟಿಗ್ರೇಟೆಡ್ ಚಿಪ್ ಅಳವಡಿಸಿ, ಮೀಟರ್ನಲ್ಲಿ ಸರಿಯಾದ ಅಂಕಿ-ಅಂಶ ಮತ್ತು ಕಡಿಮೆ ಇಂಧನ ತುಂಬುವಂತೆ ಮಾಡಿ ತಮ್ಮ ಕೈಚಳಕವನ್ನು ತೋರಿ ಕೋಟ್ಯಾಂತರ ಹಣವನ್ನು ಗ್ರಾಹಕರಿಗೆ ಮೋಸ ಮಾಡುತ್ತಿದ್ದರು.
ಪ್ರತಿ ಸಾವಿರ ಮಿಲಿ ಲೀಟರ್ಗೆ 970 ಮಿಲಿಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಮಾತ್ರ ಹೊರ ಬರುವಂತೆ ಚಿಪ್ ಅಳವಡಿಸಿದ್ದರು. ಸೀಜ್ ಮಾಡಿರುವ 33 ಬಂಕ್ಗಳಲ್ಲಿ 17 ಪಂಪ್ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್, (9)ಭಾರತ್ ಪೆಟ್ರೋಲಿಯಂ ಕಾರ್ಪೋರೇಷ್ ಲಿಮಿಟೆಡ್ , (2)ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಮತ್ತು ಉಳಿದ ಎರಡು ಬಂಕ್ ಎಸ್ಸಾರ್ಗೆ ಸೇರಿದ್ದಾಗಿವೆ.
ಈ ಇಂಟಿಗ್ರೇಟೆಡ್ ಚಿಪ್ಸ್ಗಳನ್ನು ಬಂಕ್ ಮಾಲೀಕರ ಒಪ್ಪಿಗೆ ಪಡದೇ ಅಳವಡಿಸುತ್ತಿದ್ದು, ಈ ಮೂಲಕ ಕೋಟ್ಯಾಂತರ ರೂಪಾಯಿಯನ್ನು ಗ್ರಾಹಕರಿಗೆ ಗೊತ್ತಿಲ್ಲದೇ ಅಕ್ರಮವಾಗಿ ಸಂಗ್ರಹಿಸಿದ್ದಾರೆಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ ಸಜ್ಜನರ್ ಮಾಹಿತಿ ನೀಡಿದ್ದಾರೆ.