ಹುಬ್ಬಳ್ಳಿ, ಸೆ 06 (DaijiworldNews/PY): ಇದೇ ಸೆಪ್ಟೆಂಬರ್ 14ರಂದು ಸಂಸತ್ ಅಧಿವೇಶನ ಪ್ರಾರಂಭವಾಗಲಿದ್ದು, ಪ್ರಶ್ನೋತ್ತರದ ಸಮಯವನ್ನು ಒಂದು ತಾಸು ನಡೆಸುವುದಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.14 ರಿಂದ ಅಕ್ಟೋಬರ್ 1ರವರೆಗೆ ಸಂಸತ್ ಅಧಿವೇಶನ ನಡೆಯಲಿದ್ದು, ಈ ವೇಳೆ ಪ್ರಶ್ನೋತ್ತರದ ಅವಧಿಯನ್ನು ಒಂದು ತಾಸು ನಡೆಸುವುದಾಗಿ ತೀರ್ಮಾನ ಮಾಡಿದ್ದೇವೆ. ಅಲ್ಲದೇ, ಲೋಕ ಸಭೆ ಹಾಗೂ ರಾಜ್ಯ ಸಭೆ ಅಧಿವೇಶನ ವಿಶೇಷ ಸನ್ನಿವೇಶದ ಸಂದರ್ಭ ಎರಡೂ ಕಡೆಯಲ್ಲಿ ನಡೆಯಲಿದೆ. ಇನ್ನು, ಅಧಿವೇಶನದ ವೇಳೆ ಸಂಸದರ ಆಪ್ತ ಕಾರ್ಯದರ್ಶಿ ಸೇರಿದಂತೆ ಆಪ್ತ ಸಹಾಯಕರಿಗೂ ಅವಕಾಶವಿಲ್ಲ ಎಂದು ತಿಳಿಸಿದರು.
ಈ ವೇಳೆ ಡ್ರಗ್ಸ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡ್ರಗ್ಸ್ ದಂಧೆಯಲ್ಲಿ ಯಾರೇ ಪಾಲ್ಗೊಂಡಿದ್ದರೂ ಕೂಡಾ ಅಂತವರಿಗೆ ಶಿಕ್ಷೆಯಾಗಬೇಕು ಎಂದರು.