ನವದೆಹಲಿ, ಸೆ 06 (DaijiworldNews/PY): ದೇಶದ ಆರ್ಥಿಕತೆಯು ಕೊರೊನಾದ ಹೊಡೆತದಿಂದ ಸಂಕಷ್ಟಕ್ಕೊಳಗಾಗಿದ್ದು, ಬೇಡಿಕೆಯನ್ನು ಉತ್ತೇಜಿಸಲು ಹಾಗೂ ಆರ್ಥಿಕತೆಯನ್ನು ಸರಿಪಡಿಸಲು ಸರ್ಕಾರಕ್ಕೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಕೆಲವು ಕ್ರಮಗಳನ್ನು ತಿಳಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ದೇಶದ ಶೇ.50ರಷ್ಟು ಕುಟುಂಬಗಳಿಗೆ ಕೇಂದ್ರ ಸರ್ಕಾರವು ಹಣವನ್ನು ವರ್ಗಾಯಿಸಬೇಕು. ಅವಶ್ಯಕತೆ ಇರುವ ಎಲ್ಲಾ ಕುಟುಂಬಗಳಿಗೆ ಆಹಾರ ಧಾನ್ಯವನ್ನು ನೀಡಬೇಕು. ಸರ್ಕಾರ ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಬೇಕು ಎಂದು ತಿಳಿಸಿದ್ದಾರೆ.
ಸರ್ಕಾರವು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಬೃಹತ್ ಲೋಕೋಪಯೋಗಿ ಕಾರ್ಯಗಳನ್ನು ಆರಂಭಿಸಬೇಕು. ಅಲ್ಲದೇ, ಆಹಾರ ಧಾನ್ಯಗಳ ವಿಚಾರದಲ್ಲಿ ವೇತನ ಪಾವತಿ ಮಾಡಬೇಕು. ಬ್ಯಾಂಕ್ಗಳು ಸಾಲ ನೀಡಲು ಮರು ಬಂಡವಾಳ ಹೂಡಬೇಕು. ಬಾಕಿ ಇರುವ ಜಿಎಸ್ಟಿಯ ಪರಿಹಾರವನ್ನು ಕೇಂದ್ರವು ರಾಜ್ಯಗಳಿಗೆ ಪಾವತಿಸಬೇಕು. ಮೇಲಿನ ಎಲ್ಲಾ ಕ್ರಮಗಳಿಗೂ ಹಣದ ಅಗತ್ಯವಿರುತ್ತದೆ. ಎರವಲು ಪಡೆದುಕೊಳ್ಳಿ. ಹಿಂಜರಿಯಬೇಡಿ ಎಂದು ಹೇಳಿದ್ದಾರೆ.
ಹಣ ಸಂಗ್ರಹಿಸಲು ಕೆಲವು ಹಂತಗಳನ್ನು ತಿಳಿಸಿದ ಅವರು, ಸರ್ಕಾರ ಪ್ರಸ್ತುತ ವರ್ಷ ಅಧಿಕ ಸಾಲ ಪಡೆಯಲು ಬಜೆಟ್ ನಿರ್ವಹಣೆಯ ಮಾನದಂಡಗಳನ್ನು ಸಡಿಲಿಸಬೇಕು. ಹೂಡಿಕೆಯ ವೇಗವನ್ನು ಕೂಡಾ ಮಾಡಬೇಕು. ಐಎಂಎಫ್, ಡಬ್ಲ್ಯುಬಿ, ಎಡಿಬಿಯಂತಹ ಬ್ಯಾಂಕ್ಗಳಿಂದ ಬರುವ ಅವಕಾಶಗಳನ್ನು ಸರ್ಕಾರ ಬಳಕೆ ಮಾಡಿಕೊಳ್ಳಬೇಕು. ಕೊನೆಯಾದಾಗಿ, ಕೊರತೆಯ ಭಾಗವನ್ನು ಕೇಂದ್ರ ಸರ್ಕಾರವು ವಿನಿಯೋಗಪಡಿಸಬೇಕು ಎಂದರು ತಿಳಿಸಿದ್ದಾರೆ.