ಬೆಂಗಳೂರು, ಸೆ 07 (DaijiworldNews/PY): ಅಂಗವಿಕಲ ವಿದ್ಯಾರ್ಥಿಗಳಿಗೆ ಸರ್ಕಾರಿ ಹುದ್ದೆಗಳ ನೇರ ನೇಮಕಾತಿಗಳಲ್ಲಿ ಎ ಹಾಗೂ ಬಿ ಸಮೂಹದ ಹುದ್ದೆಗಳ ಮೀಸಲಾತಿ ಪ್ರಮಾಣವನ್ನು ಶೇ.4ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಅಂತಿಮ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಈ ಹಿಂದೆ ಎ ಹಾಗೂ ಬಿ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಯ ಮೀಸಲಾತಿಯು ಶೇ.3 ರಷ್ಟಿತ್ತು. ಇದೀಗ ಮೀಸಲಾತಿಯನ್ನು ಶೇ.4ಕ್ಕೆ ಹೆಚ್ಚಿಸಲಾಗಿದೆ.
ಈ ಹಿನ್ನೆಲೆ 1977ರ ನಿಯಮಗಳು ಸೇರಿದಂತೆ ಅಂಗವಿಕಲರ ಹಕ್ಕುಗಳ ಕಾಯ್ದೆ-2016ರ ಮೀಸಲಾತಿ ಪ್ರಮಾಣ ಹಾಗೂ ಅಂಗವೈಕಲ್ಯರ ಪ್ರಮಾಣಕ್ಕೆ ಸಂಬಂಧಪಟ್ಟ ತಿದ್ದುಪಡಿಗಳನ್ನು ಒಟ್ಟು ಸೇರಿಸಿ ಕರ್ನಾಟಕ ಸಿವಿಲ್ ಸೇವೆಗಳ ನಿಯಮಗಳು-2020ರನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದೆ.
1995ರಲ್ಲಿ ರಾಜ್ಯ ಸರ್ಕಾರಿ ಸೇವೆಗಳ ನೇರ ನೇಮಕಾತಿಯ ಮೀಸಲಾತಿ ಪ್ರಮಾಣ ಹಾಗೂ ಈ ಬಗ್ಗೆ ಅನುಸರಿಸಬೇಕಾದ ರೋಸ್ಟರ್ ನಿಗದಿಪಡಿಸಿ ಆದೇಶ ನೀಡಲಾಗಿತ್ತು. ಈ ನಿಟ್ಟಿನಲ್ಲಿ ಸಿ ಹಾಗೂ ಡಿ ಸಮೂಹ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲರಿಗೆ ಶೇ.5ರಷ್ಟು ಮೀಸಲಾತಿ ನೀಡಲಾಯಿತು.