ಕಲ್ಯಾಣಿ, ಸೆ.7(DaijiworldNews/HR): ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಪಬ್ ಜಿ ಗೇಮ್ ಆಡಲು ಸಾಧ್ಯವಾಗದಿದ್ದಕ್ಕೆ ಬೇಸರಗೊಂಡ 21 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಐಟಿಐ ವಿದ್ಯಾರ್ಥಿಯಾದ ಪ್ರೀತಮ್ ಹಾಲ್ದಾರ್(21) ಆತ್ಮಹತ್ಯೆಗೆ ಶರಣಾದ ಯುವಕ. ಬೆಳಗ್ಗೆ ಉಪಹಾರ ಸೇವಿಸಿದ ನಂತರ ತನ್ನ ಕೊಠಡಿಗೆ ತೆರಳಿ ಸಾವಿಗೆ ಶರಣಾಗಿದ್ದಾನೆ ಎಂದು ಆತನ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ಮಧ್ಯಾಹ್ನದ ಊಟಕ್ಕಾಗಿ ತಾಯಿ ಪ್ರೀತಮ್ ನನ್ನು ಕರೆಯಲು ಹೋಗಿದ್ದಾರೆ, ಕೊಠಡಿ ಒಳಗಿನಿಂದ ಲಾಕ್ ಆಗಿತ್ತು, ಎಷ್ಟು ಸಾರಿ ತಟ್ಟಿದರೂ ಬಾಗಿಲು ತೆರೆಯದ ಕಾರಣ ಅಕ್ಕಪಕ್ಕದರನ್ನು ಕರೆಸಿ ಬಾಗಿಲು ಮುರಿದು ಒಳ ಹೋಗಿದ್ದಾರೆ. ಆಗ ಆತ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡಿರುವುದು ತಿಳಿದು ಬಂದಿದೆ.
ಪ್ರೀತಮ್ ಪಬ್ ಜಿ ಗೇಮ್ ಆಡಲು ಸಾಧ್ಯವಾಗದಿದ್ದಕ್ಕೆ ಅಪ್ ಸೆಟ್ ಆಗಿದ್ದ ಎಂದು ತಾಯಿ ರತ್ನ ತಿಳಿಸಿದ್ದಾರೆ, ರಾತ್ರಿ ವೇಳೆ ಪಬ್ ಜಿ ಗೇಮ್ ಆಡುತ್ತಿದ್ದ. ಆದರೆ ಪಬ್ ಜಿ ಬ್ಯಾನ್ ಮಾಡಿದ ಮೇಲೆ ಆಡಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.