ನವದೆಹಲಿ, ಸೆ 07 (DaijiworldNews/PY): ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬ್ರೆಜಿಲ್ ಅನ್ನು ಹಿಂದಿಕ್ಕಿದ ಭಾರತ ಜಗತ್ತಿನ ಹಾಟ್ ಸ್ಪಾಟ್ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ.
ಭಾನುವಾರ ಬ್ರೆಜಿಲ್ನಲ್ಲಿ ಕೊರೊನಾ ಸೋಂಕು ದೃಢಪಟ್ಟವರ ಸಂಖ್ಯೆ 41.23 ಲಕ್ಷ ದಾಟಿದ್ದು, ಭಾರತದಲ್ಲಿ ಸೋಂಕಿತರ ಸಂಖ್ಯೆ 41.60 ಲಕ್ಷ ದಾಟಿದೆ. ಈ ನಡುವೆ ದೇಶದಲ್ಲಿ ಒಂದೇ ದಿನ 90 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇನ್ನು ಅಮೆರಿಕದಲ್ಲಿ 64.35 ಲಕ್ಷ ಕೊರೊನಾ ಸೋಂಕಿತರಿದ್ದು, ಜಗತ್ತಿನಲ್ಲಿ ಅತೀ ಹೆಚ್ಚು ಪ್ರಕರಣಗಳನ್ನು ಹೊಂದಿದೆ.
ಶನಿವಾರ ಬೆಳಿಗ್ಗೆ 8ರಿಂದ ಸೋಮವಾರ ಬೆಳಿಗ್ಗೆ 8ರ ತನಕ ಒಟ್ಟು 1,065 ಮಂದಿ ಮೃತಪಟ್ಟಿದ್ದಾರೆ. ಈ ನಡುವೆ 32 ಲಕ್ಷಕ್ಕೂ ಅಧಿಕ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಒಂದೇ ದಿನದಲ್ಲು ಸುಮಾರು 70 ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.