ಬೆಂಗಳೂರು, ಸೆ.7(DaijiworldNews/HR): ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಯ ನಂಟು ಆರೋಪ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿಯನ್ನು ಮತ್ತೆ 10 ದಿನ ಸಿಸಿಬಿ ಕಸ್ಟಡಿಗೆ ನೀಡುವಂತೆ ಸಿಸಿಬಿ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ಮಾನ್ಯವಾಗಿದ್ದು, ನ್ಯಾಯಾಲಯ ಡ್ರಗ್ಸ್ ದಂಧೆ ಆರೋಪಿ ರಾಗಿಣಿಯನ್ನು ಮತ್ತೆ 5 ದಿನ ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಬೆಂಗಳೂರಿನ ನ್ಯಾಯಾಲಯ ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.
ಇನ್ನು ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟು ಆರೋಪದಲ್ಲಿ ಸಿಸಿಬಿ ವಶದಲ್ಲಿರುವ ರಾಗಿಣಿ ಕಸ್ಟಡಿ ಇಂದಿಗೆ ಅಂತ್ಯವಾಗಿತ್ತು, ಕಳೆದ 3 ದಿನಗಳಿಂದ ರಾಗಿಣಿ ವಿಚಾರಣೆಗೆ ಸೂಕ್ತವಾಗಿ ಸ್ಪಂದಿಸಿಲ್ಲ ಹೀಗಾಗಿ ರಾಗಿಣಿಯನ್ನು ಮತ್ತೆ ಸಿಸಿಬಿ ಕಸ್ಟಡಿಗೆ ಕೊಡುವಂತೆ ಕೋರ್ಟ್ ಗೆ ಸಿಸಿಬಿ ಅರ್ಜಿ ಸಲ್ಲಿಸಿತ್ತು.
1ನೇ ಎಸಿಎಂಎಂ ನ್ಯಾಯಾಲಯದ ನಾಯ್ಯಾಧೀಶರಾದ ಜಗದೀಶ್ ಅವರು ಈ ಆದೇಶ ನೀಡಿದ್ದು, ಈ ಮೂಲಕ ರಾಗಿಣಿಯವರಿಂದ ಮುಂದಿನ ಐದು ದಿನ ಸಿಸಿಬಿ ಪೊಲೀಸರು ಡ್ರಗ್ಸ್ ದಂಧೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.